Posts Slider

Karnataka Voice

Latest Kannada News

ಜೀವನ್ಮರಣದಲ್ಲಿದ್ದವರಿಗೆ ಆಪ್ತಮಿತ್ರ “ಮಂಜುನಾಥ” – ಈತನೊಲಿದರೇ ಕೊರಡು ಕೊನರುವುದಯ್ಯ..!

1 min read
Spread the love

ಧಾರವಾಡ: ಅಯ್ಯೋ.. ಅಮ್ಮಾ.. ದೇವರೇ.. ಭಗವಂತಾ.. ಎನ್ನೋ ಧ್ವನಿಗಳು ಧಾರವಾಡದ ಸುತ್ತಮುತ್ತ ಎಲ್ಲೇಲ್ಲಿ ಕೇಳುತ್ತವೋ ಅಲ್ಲೇಲ್ಲಾ ಈ ಮಂಜುನಾಥ ಪ್ರತ್ಯಕ್ಷನಾಗುತ್ತಾನೆ. ಮೊದಲು ಜೀವ ಉಳಿಸೋ ಪ್ರಯತ್ನ. ಅದೇ ಕಾರಣಕ್ಕೆ ವಾಹನದಲ್ಲಿ ಉಸಿರಾಡೋ ಜೀವಗಳನ್ನ ಹುಡುಕೋ ಪ್ರಯತ್ನ ಮಾಡ್ತಾಯಿರ್ತಾರೆ. ಅಷ್ಟರಲ್ಲೇ ಕೈಗೆ ಸಿಕ್ಕವರನ್ನ ಮೊದಲು ಆಸ್ಪತ್ರೆಗೆ ತಲುಪಿಸೋ ಭಗವಂತನೇ ಸ್ವರೂಪಿಯೇ ಈ ಮಂಜುನಾಥ..!

ಹೌದು.. ಧಾರವಾಡದ  ಈ ಮಂಜುನಾಥ ಕರೆಪ್ಪನವರ, ಸ್ಥಳೀಯರಿಗೆ ಅಷ್ಟೊಂದು ಪರಿಚಯವಿದೇಯೋ ಇಲ್ಲವೋ ಗೊತ್ತಿಲ್ಲ. ಆದರೆ, ಹಲವು ರಾಜ್ಯದ ಜನರು ಇವರಿಗೆ ಗೊತ್ತು. ಯಾಕಂದ್ರೇ, ಧಾರವಾಡ ಗ್ರಾಮೀಣ ಭಾಗದಲ್ಲಿ ಎಲ್ಲೇ ಅಪಘಾತಗಳು ಸಂಭವಿಸಲಿ, ಇವರಲ್ಲಿ ಹಾಜರಾಗ್ತಾರೆ.

ಈ ಮಂಜುನಾಥ ಕರೆಪ್ಪನವರ ಧಾರವಾಡದ ಮೈಲಾರಲಿಂಗನಗರದ ನಿವಾಸಿ. ಓಂ ಸಾಯಿ ಕ್ರೇನ್ ಸರ್ವೀಸ್ ಮತ್ತು ಅಂಬ್ಯುಲೆನ್ಸ್ ಇಟ್ಟುಕೊಂಡಿರುವ ಇವರಿಗೆ ಜೀವದ ಹಂಗು ತೊರೆದು ಸಾಥ್ ನೀಡುತ್ತಿರುವುದು ಮೈಲಾರಿ ಮತ್ತು ಕೃಷ್ಣಾ ಎಂಬ ಯುವಕರು.

ಧಾರವಾಡದ ಇಟಿಗಟ್ಟಿ ಬಳಿಯ ಅಪಘಾತದಲ್ಲಿ ಹಲವು ಜೀವಗಳು ಹೋದವು. ಹಾಗಂತ ನೋಡಿದರೇ ಅದೂ ಬೇಸರದ ಸಂಗತಿಯೇ. ಆದರೆ, ಬದುಕಿದವರನ್ನೇ ಸ್ಮರಿಸಿಕೊಂಡಾಗ, ಸಾಕ್ಷಾತ್ ನೆನಪಾಗುವುದು ಇದೇ ಮಂಜುನಾಥ.

ಇಟಿಗಟ್ಟಿಯ ಘಟನೆ ಹಲವು ಗುಣವಂತರನ್ನ ಪರಿಚಯ ಮಾಡಿಕೊಟ್ಟಿದೆ. ಸಬ್ ಇನ್ಸಪೆಕ್ಟರ್ ಮಹೇಂದ್ರಕುಮಾರ, ನುಗ್ಗಿಕೇರಿಯ ನಿಂಗಪ್ಪನಂತವರನ್ನ ಪರಿಚಯ ಮಾಡಿದೆ. ಆದರೆ, ಎಲ್ಲೂ ಕಾಣದ ಈ ಮಂಜುನಾಥ ಕರೆಪ್ಪನವರ ಮಾತ್ರ, ಎಲೆಮರೆ ಕಾಯಿಯಂತೆ ಜೀವ ಉಳಿಸುತ್ತ ಸಾಗಿದ್ದಾನೆ.

ತಾನು ಮಾಡಿದ ಕೆಲಸಕ್ಕೆ ಎಷ್ಟು ಹಣ ಬಂದಿದೆ ಎಂದೂ ಯಾವತ್ತೂ ಯೋಚನೆ ಮಾಡದೇ, ನಾನು ಇವತ್ತು ಎಷ್ಟು ಜನರನ್ನ ಉಳಿಸಲು ಸಾಧ್ಯವಾಗಿದೆ ಎಂಬುದನ್ನ ಲೆಕ್ಕಾಚಾರ ಮಾಡುವ ಮಂಜುನಾಥರಂತವರು ನಾಡಿನಲ್ಲಿ ಹೆಚ್ಚಾಗಬೇಕಿದೆ.


Spread the love

Leave a Reply

Your email address will not be published. Required fields are marked *