ಸಾವಾಗಿದ್ದ ಶಿಕ್ಷಕ ಮತ್ತೇ ಉಸಿರಾಡುತ್ತಿದ್ದಾರಂತೆ- ಸಿವಿಲ್ ಆಸ್ಪತ್ರೆಗೆ ರವಾನೆ
ಧಾರವಾಡ: ಬೆಳಿಗ್ಗೆ ಎದೆನೋವಿನಿಂದ ಶಿಕ್ಷಕ ಈರಣ್ಣ ಕಾಂಬ್ಳೆ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಶವವೆಂದು ಸಾಗಿಸಲಾಗಿದ್ದ ಶಿಕ್ಷಕ ಮತ್ತೆ ಉಸಿರಾಡುತ್ತಿದ್ದಾರೆಂದು ಧಾರವಾಡ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬೈರಿದೇವರಕೊಪ್ಪದ ರೇಣುಕಾನಗರದಿಂದ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ತರಲಾಗಿತ್ತು. ಸಂಜೆ ನಾಲ್ಕು ಗಂಟೆಗೆ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಇದೇ ಸಮಯದಲ್ಲಿ ಶಿಕ್ಷಕ ಕಾಂಬ್ಳೆ ಉಸಿರಾಡಿ, ನೀರು ಕುಡಿದರೆನ್ನಲಾಗಿದೆ. ತಕ್ಷಣವೇ ಸ್ಥಳೀಯ ವೈಧ್ಯರನ್ನ ಕರೆಯಿಸಿ ತಪಾಸಣೆ ಮಾಡಿದಾಗ ಹೃದಯ ಬಡಿತ ಇರುವುದು ಗೊತ್ತಾಗಿದೆ. ಹೀಗಾಗಿ ಶಿಕ್ಷಕ ಈರಣ್ಣ ಕಾಂಬ್ಳೆಯವರನ್ನ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.