ಬದುಕಿಗೆ ಹೊಸ ಭರವಸೆ “ಸೇವಾ ಭಾರತಿ ಟ್ರಸ್ಟ್”- ಧಾರವಾಡದ ಗಲ್ಲಿ ಗಲ್ಲಿಯಲ್ಲೂ ವಿನೂತನ ಕಾರ್ಯಕ್ರಮ…!!!

ಧಾರವಾಡ: ಸಾರ್ವಜನಿಕರ ಜೀವನದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಹೊಸ ಭರವಸೆಯಾಗಿ ಸೇವಾ ಭಾರತಿ ಟ್ರಸ್ಟ್, ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ.
ವೀಡಿಯೋ…
ಧಾರವಾಡದ ಗಲ್ಲಿ ಗಲ್ಲಿಯಲ್ಲಿರುವ ನೀರಿನ ಟ್ಯಾಂಕ್‌ಗಳ ಶುದ್ಧೀಕರಣ ಮಾಡಲಾಗಿದೆ. ಈಗಾಗಲೇ 28 ಟ್ಯಾಂಕ್‌ಗಳನ್ನ ಸ್ವಚ್ಚಗೊಳಿಸಲಾಗಿದ್ದು, ಇಂದು ಹಾವೇರಿಪೇಟೆಯ ಕುಂಬಾರ ಓಣಿಯಲ್ಲಿನ ಟ್ಯಾಂಕ್‌ನ್ನ ಸ್ವಚ್ಚಗೊಳಿಸಲಾಯಿತು.
ಟ್ರಸ್ಟ್ ಮಂಜುನಾಥ ಶಿವಪ್ಪ ಮಕ್ಕಳಗೇರಿ ಸ್ವತಃ ಭಾಗವಹಿಸಿ, ಜನರ ಪ್ರೀತಿಗೆ ಪಾತ್ರರಾದರು. ಜನಹಿತ ಕಾರ್ಯಕ್ರಮಗಳನ್ನು ಸೇವಾ ಭಾರತಿ ಟ್ರಸ್ಟ್ ಹಮ್ಮಿಕೊಂಡು ಮುನ್ನಡೆಯುತ್ತಿರುವುದು ಹೊಸ ಭರವಸೆಯನ್ನ ಜನರಲ್ಲಿ ಮೂಡಿಸುತ್ತಿದೆ.