ಮುಖ್ಯಮಂತ್ರಿ.. ಶಿಕ್ಷಣ ಸಚಿವರಿಗೆ ಗ್ರಾಮೀಣ ಶಿಕ್ಷಕರ ಸಂಘದ ತುರ್ತು ಆಗ್ರಹ ಏನು…!?
1 min readಹುಬ್ಬಳ್ಳಿ: ರಾಜ್ಯದಲ್ಲಿ ಕೋವಿಡ್ ಎರಡನೇಯ ಅಲೆಯು ಹೆಚ್ಚಾಗುತ್ತಿದ್ದು, ಇದೇ ಕಾರಣಕ್ಕೆ ಶಿಕ್ಷಕರಿಗೆ ಬೇಸಿಗೆ ರಜೆಯನ್ನ ನೀಡಬೇಕೆಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಹಾಗೂ ಸಚಿವ ಜಗದೀಶ ಶೆಟ್ಟರ ಅವರಿಗೆ ಪತ್ರವನ್ನ ಬರೆದು ಒತ್ತಾಯಿಸಿದ್ದಾರೆ.
ಪತ್ರದ ಸಾರಾಂಶ ಇಲ್ಲಿದೆ ನೋಡಿ..
ಮಾನ್ಯರೇ,
ವಿಷಯ: *ಶಿಕ್ಷಕರಿಗೆ ಬೇಸಿಗೆ ರಜೆ ನೀಡುವಂತೆ ಶಿಕ್ಷಣ ಸಚಿವರಿಗೆ ಗ್ರಾಮೀಣ ಶಿಕ್ಷಕರ ಸಂಘ ಆಗ್ರಹ
ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸರಕಾರವು 1 ರಿಂದ 9 ನೇ ತರಗತಿವರೆಗೆ ತರಗತಿಗಳನ್ನು ನಡೆಸಬಾರದೆಂದು ಆದೇಶಿಸಿದೆ. ಮುಂದುವರೆದು ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆಯು ತೀವ್ರವಾಗುತ್ತಿದ್ದು ಮಕ್ಕಳು ಶಾಲೆಗೆ ಬರದೆ ಇದ್ದರೂ ಶಿಕ್ಷಕರು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಅಲ್ಲದೇ ಕಳೆದ 8 ದಿನಗಳಿಂದ ಸಾರಿಗೆ ನೌಕರರ ಪ್ರತಿಭಟನೆಯಿಂದಾಗಿ ಬಸ್ಸುಗಳ ಓಡಾಟವಿಲ್ಲದೇ ವಿಶೇಷವಾಗಿ ಮಹಿಳಾ ಶಿಕ್ಷಕಿಯರಿಗೆ ತುಂಬಾ ತೊಂದರೆಯಾಗುತ್ತಿದೆ ಅಲ್ಲದೆ ನಮ್ಮ ಇಲಾಖೆ ರಜೆಸಹಿತ ಇಲಾಖೆಯಾಗಿದೆ. ಆದ ಕಾರಣ . ಈ ಎಲ್ಲ ಮೇಲಿನ ಅಂಶಗಳನ್ನು ಪರಿಗಣಿಸಿ ಹಾಗೂ ಕೋವಿಡ್ ನ ನಿಯಂತ್ರಣಕ್ಕೆ ಮುಂಜಾಗೃತ ಕ್ರಮವಾಗಿ ರಾಜ್ಯದ ಎಲ್ಲ ಶಿಕ್ಷಕರಿಗೆ ಬೇಸಿಗೆ ರಜೆ ನೀಡಲು ರಾಜ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ .ರಾಜ್ಯ ಪ್ರ.ಕಾ.ಮಲ್ಲಿಕಾರ್ಜುನ.ಸಿ.ಉಪ್ಪಿನ, ಮಹಾಪೋಷಕರಾದ ಪವಾಡೆಪ್ಪ ಕಾಂಬಳೆ, ಗೌರವಾಧ್ಯಕ್ಷರಾದ ಎಲ್.ಆಯ್.ಲಕ್ಕಮ್ಮನವರ, ಕಾರ್ಯಾಧ್ಯಕ್ಷರಾದ ಶರಣಪ್ಪಗೌಡ್ರ.ಆರ್.ಕೆ, ಕೋಶಾಧ್ಯಕ್ಷರಾದ ಎಸ್.ಎಫ್.ಪಾಟೀಲ, ಉಪಾಧ್ಯಕರಾದ ಎಮ್.ಆಯ್.ಮುನವಳ್ಳಿ, ನಾಗರಾಜು ಕೆ, ಸುರೇಶ ಅರಳಿ, ಧರ್ಮಣ್ಣ ಭಜಂತ್ರಿ, ಕುಕನೂರ ಅಕ್ಕಮಹಾದೇವಿ ನೂಲ್ವಿ, ಜಿ.ಟಿ.ಲಕ್ಷ್ಮಿದೇವಮ್ಮ, ಶರಣಬಸವ ಬನ್ನಿಗೋಳ, ಅಶೋಕ ಬಿಸೆರೊಟ್ಟಿ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ.