ಧಾರವಾಡ ಚಿರತೆ- ನಾ ನೋಡಿಲ್ರೀ, ಅಂವಾ ನೋಡ್ಯಾನ್: ಇಲ್ರೀಪಾ ನಾನೂ ನೋಡಿಲ್ಲಾ…!!!

ಧಾರವಾಡ: ತಾಲೂಕಿನ ಹಲವು ಗ್ರಾಮಗಳಲ್ಲಿ ಚಿರತೆ ಕಂಡು ಬಂದಿದೆ ಎಂದು ಹೇಳುವ ವದಂತಿಯೊಂದು ಪೊಲೀಸ್ ಹಾಗೂ ಅರಣ್ಯ ಇಲಾಖೆಯವರಿಗೆ ತಲೆನೋವಾಗಿ ಪರಿಣಮಿಸಿದೆ.
ಹೌದು… ಕಳೆದ ಒಂದೂವರೆ ವರ್ಷದ ಹಿಂದೆಯೂ ಚಿರತೆಯೊಂದು ಹುಬ್ಬಳ್ಳಿ ಹಾಗೂ ಧಾರವಾಡ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬಂದು ಜನರನ್ನ ಹೌಹಾರಿಸಿತ್ತು. ಅಷ್ಟೇ ಅಲ್ಲ, ವದಂತಿಗಳು ಜನರನ್ನ ಮತ್ತಷ್ಟು ಗಲಿಬಿಲಿಗೊಳ್ಳುವಂತೆ ಮಾಡಿದ್ದವು.
ವೈರಲ್ ಆಗಿರುವ ವೀಡಿಯೋ…
ಈಗ ಮತ್ತೆ ಧಾರವಾಡ ಗ್ರಾಮೀಣ ಪ್ರದೇಶದಲ್ಲಿ ಚಿರತೆಯೊಂದು ಬಂದಿದೆ. ಅದನ್ನ ಮೊಬೈಲ್ ಫೋನ್ ಮೂಲಕ ವೀಡಿಯೋ ಮಾಡಲಾಗಿದೆಯಂದೂ 20 ಸೆಕೆಂಡಿನ ವೀಡಿಯೋ ವೈರಲ್ ಮಾಡಲಾಗಿದೆ. ಅಸಲಿಗೆ ವೀಡಿಯೋ ಮಾಡಿದ್ದು ಯಾರೂ ಎಂಬುದೇ ಇನ್ನೂ ಪತ್ತೆಯಾಗಿಲ್ಲ.
ಚಿರತೆ ಕಂಡು ಬಂದಿದೆ ಎಂದು ವದಂತಿ ಹಬ್ಬಿರುವ ಗ್ರಾಮಗಳಿಗೆ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಕೇಳಿದರೂ, ಯಾವುದೇ ಪ್ರಯೋಜನವಾಗಿಲ್ಲ. ನೋಡಿದ ಒಬ್ಬರು ಸಿಗುತ್ತಿಲ್ಲ.