ಲಕ್ಷ್ಮೀ ಹೆಬ್ಬಾಳ್ಕರ್ ಮಗನಿಗೆ “MP ಟಿಕೆಟ್ ಫಿಕ್ಸ್”- ಅಕ್ಕನ ಮಗಳ ಗಂಡ ” ರಜತ್‌ಗೆ ನೋ ಟಿಕೆಟ್”- ರಾಜಕೀಯ ಮಾರಾಯ್ರೇ….
1 min readಹುಬ್ಬಳ್ಳಿ: ರಜತ ಉಳ್ಳಾಗಡ್ಡಿಮಠ ನನ್ನ ಅಳಿಯ ಆಗಿದ್ದಕ್ಕೆ ರಾಜಕೀಯದಲ್ಲಿ ತೊಂದರೆ ಅನುಭವಿಸುತ್ತಿದ್ದಾನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೆಲವು ದಿನಗಳ ಹಿಂದಷ್ಟೇ ಹುಬ್ಬಳ್ಳಿಯ ಗಿರಣಿಚಾಳದ ಕಾರ್ಯಕ್ರಮದಲ್ಲಿ ಹೇಳಿದ ಮಾತು ಅಕ್ಷರಸಃ ಸತ್ಯವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೌದು… ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರಿಯ ಮಗಳ ಪತಿಯಾಗಿರುವ ರಜತ ಉಳ್ಳಾಗಡ್ಡಿಮಠ ಅವರಿಗೆ ಟಿಕೆಟ್ ತಪ್ಪುವುದು ಖಾತ್ರಿಯಾಗಿದೆ. ಹಾಗಾಗಿಯೇ ಇಂದು ರಜತ್ ಅವರ ಅಭಿಮಾನಿಗಳು ಕೈ ಸಮೇತ ಬೀದಿಗಿಳಿದು ಹೋರಾಟ ನಡೆಸಿದರು.
ಬೆಳಗಾವಿಯಲ್ಲಿ ಮೃಣಾಲ ಹೆಬ್ಬಾಳ್ಕರ್‌ಗೆ ಟಿಕೆಟ್ ಫಿಕ್ಸ್ ಆಗಿದೆ. ಈಗಾಗಲೇ ಹೆಬ್ಬಾಳ್ಕರ್ ಸಹೋದರ ಎಂಎಲ್ಸಿ, ಮಗನಿಗೆ ಎಂಪಿ ಟಿಕೆಟ್. ಆದರೆ, ಹುಬ್ಬಳ್ಳಿಯಲ್ಲಿರುವ ಅಳಿಯನಿಗೆ ಅಧೋಗತಿಯಾಗಿದೆ.
ಈಗ ಜನರೇ ನಿರ್ಧರಿಸಬೇಕು. ರಜತ ಸಂಭ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೇಳಿಕೆಯ ಮರ್ಮವೇನು ಎಂಬುದು. ರಜತ್ ಅವರಿಗೆ ಟಿಕೆಟ್ ಸಿಗದೇ ಇರುವುದಕ್ಕೆ ಮೃಣಾಲ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ಫಿಕ್ಸ್ ಆಗಿದ್ದೆ ಕಾರಣವಿರಬಹುದಾ ಎಂಬ ಪ್ರಶ್ನೆಯೂ ಮೂಡಿದೆ.
ರಾಜಕೀಯದಲ್ಲಿ ಸ್ವಂತಕ್ಕೆ ಇರುವ ಶಕ್ತಿ ಏನು ಎಂಬುದು ಮುಖ್ಯವಾಗತ್ತೆ ಹೊರತಾಗಿ, ಮತ್ತೊಂದಲ್ಲ.