ಎಲ್ಲಿ ಮೈನಸ್ಸೋ.. ಅಲ್ಲಿಂದಲೇ ಪ್ಲಸ್ ಮಾಡಿಕೊಂಡ ಲತಾ ಮುಳ್ಳೂರು…!
1 min readಹುಬ್ಬಳ್ಳಿ: ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಂಜುಳಾ ಬಿ ಅವರನ್ನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಡಿದ ಬೆನ್ನಲ್ಲೇ, ಶಿಕ್ಷಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷೆ ಮಂಜುಳಾ ಬಿ ಅವರನ್ನ ಫುಲೆ ಸಂಘದ ಸ್ಥಾನದಿಂದ ಬಿಡುಗಡೆಗೊಳಿಸಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಹೆಚ್ಚು ಮತ ಪಡೆದು ಗೆದ್ದಿದ್ದ ಜ್ಯೋತಿ ಎಚ್ ಅವರು, ಶಿಕ್ಷಕರ ಸಂಘಕ್ಕೆ ರಾಜೀನಾಮೆ ನೀಡಿ, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ.
ತಮ್ಮದೇ ಬ್ಯಾನರ್ ಪೋಸ್ಟರನಲ್ಲಿ ಕಾಣಿಸಿಕೊಂಡಿದ್ದ ಮಂಜುಳಾ ಬಿ ಅವರನ್ನ ಬಿಡುಗಡೆಗೊಳಿಸಲು ಕಾರಣವಾದ ಸಂಘದವರೇ, ಗೆದ್ದರೂ ರಾಜೀನಾಮೆ ನೀಡಿ ಫುಲೆ ಸಂಘಕ್ಕೆ ಸೇರಿಕೊಂಡಿದ್ದು, ಸಂಸ್ಥಾಪಕ ಅಧ್ಯಕ್ಷೆ ಲತಾ ಮುಳ್ಳೂರ ಅವರ ಸ್ವಾಭಿಮಾನವನ್ನ ಬಿಂಬಿಸುವಂತಿದೆ.
ಜ್ಯೋತಿ ಎಚ್ ಅವರ ರಾಜೀನಾಮೆ ವಿವರ..
ಶ್ರೀ ಶಂಭುಲಿಂಗನಗೌಡ ಪಾಟೀಲ್
ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು
ಮಾನ್ಯರೇ
ವಿಷಯ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚುನಾವಣೆಯ 2020-25 ಚುನಾಯಿತ ಪ್ರತಿನಿಧಿ ಸದಸ್ಯತ್ವ ಮತ್ತು ಹರಿಹರ ತಾಲೂಕು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಬಗ್ಗೆ
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಶ್ರೀಮತಿ ಜ್ಯೋತಿ ಹೆಚ್. ಹರಿಹರ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಈ ವರ್ಷದ ಚುನಾವಣೆಯಲ್ಲಿ ತಾಲೂಕಿಗೆ ಹೆಚ್ಚು ಮತ (423) ಪಡೆದು ಚುನಾಯಿತ ಪ್ರತಿನಿಧಿ ಯಾಗಿದ್ದು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹರಿಹರ ತಾಲೂಕಿನ ಉಪಾಧ್ಯಕ್ಷರು ಆಗಿದ್ದೇನೆ ಇತ್ತೀಚೆಗೆ ತಾವು ಸೋತವರಿಗೆ ಹುದ್ದೆಗಳನ್ನು ನೀಡುತ್ತಿದ್ದೀರಾ ಚುನಾಯಿತ ಪ್ರತಿನಿಧಿಗಳಿಗೆ ಆದ್ಯತೆಯನ್ನು ನೀಡುತ್ತಿಲ್ಲ..ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡದೆ ಬೇರೆ ಬೇರೆ ಸಂಘಗಳಲ್ಲಿದ್ದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಸೋತವರಿಗೆ ಹುದ್ದೆಗಳನ್ನು ನೀಡುತ್ತಾ ಹೋಗುತ್ತಿದ್ದೀರಾ ಇದರಿಂದ ನನಗೆ ಬೇಸರವಾಗಿದೆ ಆದ್ದರಿಂದ ನಾನು ನಿಮ್ಮ ಸಂಘಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಇನ್ನುಮುಂದೆ ನನ್ನ ಸದಸ್ಯತ್ವ ಹಣವನ್ನು ನನ್ನ ವೇತನದಲ್ಲಿ ಕಟಾವಣೆ ಮಾಡಬಾರದು ಹಾಗೂ ಇನ್ನು ಮುಂದೆ ಮಹಿಳೆಯರಿಗೆ ಆದ್ಯತೆ ನೀಡುತ್ತಿರುವ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದಲ್ಲಿ ಶಾಶ್ವತವಾಗಿ ಸಂಘಟನೆಯಲ್ಲಿ ತೊಡಗುತ್ತೇನೆ
ಧನ್ಯವಾದಗಳೊಂದಿಗೆ
ಇಂತಿ ನಿಮ್ಮ ವಿಶ್ವಾಸಿ
ಜ್ಯೋತಿ ಹೆಚ್
ಹರಿಹರ ತಾಲೂಕು
ಜ್ಯೋತಿ ಎಚ್ ಅವರ ಬಗ್ಗೆ
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನಲ್ಲಿ ಈ ವರ್ಷದ ಚುನಾವಣೆಯಲ್ಲಿ ಇಡೀ ತಾಲೂಕಿಗೆ ಎಲ್ಲರಿಗಿಂತ ಅತೀ ಹೆಚ್ಚು ಮತ ಪಡೆದ(423) ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾಯಿತ ಪ್ರತಿನಿಧಿ ಹುದ್ದೆಗೆ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಶ್ರೀಮತಿ ಜ್ಯೋತಿ H. ಇವರಿಂದ ಇಂದು ದಿ.23.02.2021 ಮಂಗಳವಾರ ರಾಜೀನಾಮೆ. ನೀಡಿದ್ದಾರೆ.
ಚುನಾಯಿತ ಪ್ರತಿನಿಧಿಗಳಿಗೆ ಆದ್ಯತೆ ನೀಡದೆ ಸೋತವರಿಗೆ ಹುದ್ದೆಯ ಆಸೆ ತೋರಿಸಿ ಹುದ್ದೆ ಕೊಡುತ್ತಿರುವುದನ್ನು ವಿರೋಧಿಸುತ್ತಿದ್ದೇನೆ ಇದರಿಂದ ಬೇಸತ್ತು ರಾಜೀನಾಮೆ ನೀಡಿ ಸಂಪೂರ್ಣ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ನಮ್ಮ್ ಮಾತೃ ಸಂಘದ ಸಂಘಟನೆಯಲ್ಲಿ ತೊಡಗುತ್ತೇನೆ ಎಂದು ತಿಳಿಸಿದ್ದಾರೆ