ಬಿಜೆಪಿ ಮುಖಂಡನ ಮಡದಿ ಎನ್ನುತ್ತಿದ್ದ ‘ಆಕೆ’ ನೇಣಿಗೆ ಶರಣು; ಸಾಕ್ಷ್ಯ ಪೊಲೀಸರ ಬಳಿ.. ಹಣ ಪಡೆದವರಿಗೀಗ ಡವಡವ..!
ಹುಬ್ಬಳ್ಳಿ: ಬಿಜೆಪಿ ಮುಖಂಡನ ಪತ್ನಿಯಂದು ಹೇಳಿಕೊಳ್ಳುತ್ತ ಪದೇ ಪದೇ ಗಲಾಟೆ ಮಾಡಿಕೊಳ್ಳುತ್ತಿದ್ದ ಮಹಿಳೆ ತನ್ನದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ತಾನು ಯಾವ್ಯಾವ ವಿಷಯಕ್ಕೆ ಯಾರು ಯಾರಿಗೆ ಹಣ ಕೊಟ್ಟಿರುವ ಬಗ್ಗೆ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾಳೆಂದು ಹೇಳಲಾಗಿದೆ.
ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಸವರಾಜ ಕೆಲಗೇರಿ ಎಂಬುವವರ ಪತ್ನಿ ನಾನು ಎಂದು ಹೇಳಿಕೊಳ್ಳುತ್ತಿದ್ದ ಕವಿತಾ ಅಣ್ವೇಕರ ಎಂಬ ಮಹಿಳೆಯೇ, ಶಾಂತಿನಗರದ ಮನೆಯಲ್ಲಿ ನೇಣಿಗೆ ಶರಣಾಗುವ ಮೂಲಕ ದುರಂತ ಅಂತ್ಯವಾಗಿದ್ದಾರೆ.
ಕೆಲವ ತಿಂಗಳ ಹಿಂದೆ ಬಸವರಾಜ ಕೆಲಗೇರಿ ಎಂಬ ವ್ಯಕ್ತಿಯನ್ನ ಬಿಜೆಪಿ ಮುಖಂಡನೆಂದು ಬಿಂಬಿಸಿ, ಆತ ತನ್ನ ಗಂಡನೆಂದು ಹೇಳಿಕೊಂಡು ರಂಪಾ ಮಾಡಿದ್ದ ಕವಿತಾ ಅಣ್ವೇಕರ, ತದನಂತರ ಕಿಮ್ಸ್ ಆವರಣದಲ್ಲಿಯೂ ರಕ್ತಸಿಕ್ತವಾಗಿ ಕಾಣಿಸಿಕೊಂಡು ಬಸವರಾಜ ಕೆಲಗೇರಿಯ ವಿರುದ್ಧ ಆರೋಪ ಮಾಡಿದ್ದರು.
ಈ ಎಲ್ಲ ಘಟನೆಗಳು ನಡೆದು ಇನ್ನೂ ತಿಂಗಳು ಕಳೆದಿಲ್ಲ ಅಷ್ಟರಲ್ಲಿ ಕವಿತಾ, ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ತನಗೆ ಸಹಾಯ ಮಾಡುವ ನೆಪದಲ್ಲಿಯೂ ಹಣವನ್ನ ಪೀಕಲಾಗಿದೆ ಎಂಬುದನ್ನ ಹೆಸರು ಸಮೇತ ನಮೂದು ಮಾಡಿದ್ದಾರೆನ್ನುವುದು ಗೊತ್ತಾಗಿದೆ.
ಬಸವರಾಜ ಕೆಲಗೇರಿಗೂ ಬಿಜೆಪಿಗೂ ಯಾವುದೇ ಸಂಬಂಧವೇಯಿಲ್ಲ. ಆದರೂ, ಆತನನ್ನ ಕೆಲವರು ಬಿಜೆಪಿ ಮುಖಂಡನೆಂದು ಬಿಂಬಿಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.