ಲೇಡಿ ತಹಶೀಲ್ದಾರ್ ಧಮಕಿ: ದಂಡಾಧಿಕಾರಿಗೆ ಕಾನೂನು ಹೇಳಿದ್ದು ಯಾರೂ ಗೊತ್ತಾ..?
1 min readರಾಯಚೂರು: ಮೈಕ್ ಹಚ್ಚುವ ವಿಷಯವಾಗಿ ಕಾನೂನು ಬಗ್ಗೆ ಲೇಡಿ ತಹಶೀಲ್ದಾರ ಹೇಳಿದ್ದಕ್ಕೆ ಯುವಕರು ತಹಶೀಲ್ದಾರಗೆ ಆವಾಜ್ ಹಾಕಿದ ಘಟನೆ ಜಿಲ್ಲೆಯ ದೇವದುರ್ಗ ಪಟ್ಟಣದ ಶಾಂತಿನಗರದಲ್ಲಿ ನಡೆದಿದೆ.
ಈ ಕುರಿತ ಎಕ್ಸಕ್ಲೂಸಿವ್ ವೀಡಿಯೋ
https://www.youtube.com/watch?v=W7fbhZDhpTQ
ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಬಗ್ಗೆ ಈಗಾಗಲೇ ಸರಕಾರದ ಆದೇಶವನ್ನ ಪ್ರತಿಯೊಬ್ಬರಿಗೆ ತಿಳಿಸಿ ಪರವಾನಿಗೆ ಕೊಟ್ಟಿದ್ದರೂ ಕೂಡಾ, ಕೆಲವೆಡೆ ಮೈಕ್ ಗಳನ್ನ ಹಚ್ಚುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ವತಃ ತಹಶೀಲ್ದಾರ ಸಂತೋಷಿ ರಾಣಿ ಫೀಲ್ಡಿಗೆ ಇಳಿದಿದ್ದರು. ಆಗ ಶಾಂತಿನಗರದಲ್ಲಿ ಕಂಡು ಬಂದು ಮೈಕ್-ಸ್ಪೀಕರ್ ತೆಗೆಯುವಂತೆ ಹೇಳತ್ತಿದ್ದಂತೆ ಯುವಕರು ಹರಿಹಾಯ್ದರು.
ಗುಂಪು ಗುಂಪಾಗಿ ನಿಂತಿದ್ದ ಯುವಕರು ತಮ್ಮ ಮನಸ್ಸಿಗೆ ತೋಚಿದ್ದನ್ನ ತಹಶೀಲ್ದಾರಗೆ ಹೇಳುತ್ತಿದ್ದರೂ ಅನಿವಾರ್ಯವಾಗಿ ತಹಶೀಲ್ದಾರ ಸುಮ್ಮನೆ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ತದನಂತರ ಪೊಲೀಸರು ಬಂದು ಪರಿಸ್ಥಿತಿಯನ್ನ ತಹಬದಿಗೆ ತಂದ ಘಟನೆ ನಡೆದಿದೆ.
ಅಧಿಕಾರಿಗಳು ಸರಕಾರದ ಆದೇಶವನ್ನ ಪಾಲಿಸಬೇಕಾಗತ್ತೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ರೀತಿಯಲ್ಲಿ ಯುವಕರು ಮಾತನಾಡುತ್ತಿದ್ದು, ಇಂದಿಗೂ ಇಂತಹ ಸ್ಥಿತಿ ನಿರ್ಮಾಣವಾಗಲು ಸಾಧ್ಯವೆನ್ನುವಷ್ಟು ಸಾಕ್ಷಿಯಾಯಿತು.