Posts Slider

Karnataka Voice

Latest Kannada News

ಅವಳಿವತ್ತು ಸಿಕ್ಕಿದ್ದಾಳೆ..: ನೀವೂ ಪ್ಲೀಸ್ ಹುಡುಕಬೇಡಿ..

Spread the love

ಧಾರವಾಡ: ಆಕೆ ಚೂರಾದರೂ ಆರೋಗ್ಯದಲ್ಲಿ ಚೇತರಿಕೆ ಕಂಡರೇ ಸಾಕು ಎಂದುಕೊಂಡು ನಗರದ ಮಾನಸಿಕ ಆಸ್ಪತ್ರೆಯಲ್ಲಿ ದಾಖಲು ಮಾಡಿ, ದೇವರನ್ನ ನೆನೆಯುತ್ತಿದ್ದ ಕುಟುಂಬದವರು ಬೀದಿ ಬೀದಿ ಅಲೆಯುವ ಸ್ಥಿತಿ ನಿರ್ಮಾಣವಾಗಿತ್ತು.  ಹಾಗಾಗಿಯೇ ನಿಮನ್ನ ರಿಕ್ವೆಸ್ಟ್ ಮಾಡಿಕೊಳ್ಳಲಾಗಿತ್ತು.

ಈ ಭಾವಚಿತ್ರದಲ್ಲಿ ಕಾಣುತ್ತಿರುವ ಮಹಿಳೆಯ ಹೆಸರು ಬಸಮ್ಮ ಶರಣಗೌಡ ಮುಧೋಳ. ಮೂಲತಃ ಯಾದಗಿರಿ ಜಿಲ್ಲೆಯ ನರಸಿಂಗಪೇಟೆ ಗ್ರಾಮದವರು. ಕೆಲವು ದಿನಗಳಿಂದ ಮಾನಸಿಕವಾಗಿ ಸರಿಯಿಲ್ಲದ ಕಾರಣ, ಆಸ್ಪತ್ರೆಗೆ ತಂದು ದಾಖಲು ಮಾಡಲಾಗಿತ್ತೆಂಬ ವಿಷಯವನ್ನ ನಿಮ್ಮ ಗಮನಕ್ಕೆ ತರಲಾಗಿತ್ತು.

ಆದರೆ, ನಿನ್ನೆ ಆಸ್ಪತ್ರೆಯಿಂದಲೇ ಬಸಮ್ಮ ಕಾಣೆಯಾಗಿದ್ದಾರೆ. ಸುಮಾರು 25 ವರ್ಷದ ಈ ಮಹಿಳೆಯ ಬಗ್ಗೆ ಮಾಹಿತಿ ಕೊಟ್ಟರೇ, ಆ ಕುಟುಂಬಕ್ಕೆ ಚೂರು ನೆಮ್ಮದಿಯನ್ನ ನೀಡಿದ ಖುಷಿ ನಿಮಗೂ ಸಿಗಬಹುದೆಂದು ನಿಮಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೀಗ, ಬಸಮ್ಮ ಸುಸ್ತಾದ ರೀತಿಯಲ್ಲಿ ಕೂತಾಗ ಕೆಲವರು ಗುರುತು ಹಿಡಿದು ಮಾಹಿತಿ ನೀಡಿದ್ದಾರೆ.

ಬಸಮ್ಮಳನ್ನ ಮತ್ತೆ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ. ಯಾವುದಕ್ಕೂ ಹುಡುಕಾಟಕ್ಕೆ ಪ್ರಯತ್ನಿಸಿದ ನಿಮಗೂ ಧನ್ಯವಾದ.


Spread the love

Leave a Reply

Your email address will not be published. Required fields are marked *