ಕಟ್ನೂರ್ ಗ್ರಾ.ಪಂ ಮಾಜಿ ಸದಸ್ಯ ರಫೀಕ್ ಅರಳಿಕಟ್ಟಿ ಸಹೋದರ ಶಬ್ಬೀರ್ ಸೇರಿ ಮೂವರ ಬಂಧನ, ಇಬ್ಬರು ಪರಾರಿ
1 min readಹುಬ್ಬಳ್ಳಿ: ತಾಲೂಕಿನ ಗಿರಿಯಾಲ ಮತ್ತು ಚೆನ್ನಾಪುರ ಮಧ್ಯವಿರುವ ಅರಣ್ಯವಲಯದಲ್ಲಿ ಇಸ್ಪೀಟ್ ಆಡುತ್ತಿದ್ದ ಕಟ್ನೂರ್ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ರಫೀಕ್ ಅರಳಿಕಟ್ಟಿಯ ಸಹೋದರ ಶಬ್ಬೀರ್ ಅರಳಿಕಟ್ಟಿ ಸೇರಿದಂತೆ ಮೂವರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನ ಶಬ್ಬೀರ ಅರಳಿಕಟ್ಟಿ, ಪರಶುರಾಮ ಶುಬ್ಬಾಯಿ ಹಾಗೂ ನಾಗಪ್ಪ ಹಡಪದ ಎಂಬ ಮೂವರನ್ನ ಬಂಧನ ಮಾಡಲಾಗಿದೆ. ಜೂಜಾಟದಲ್ಲಿ ತೊಡಗಿದ್ದ ವಿನಾಯಕ ಹಾಗೂ ಯಲ್ಲಪ್ಪ ಪರಾರಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಧಾರವಾಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ರಮೇಶ ಗೋಕಾಕ ನೇತೃತ್ವದಲ್ಲಿ ಗ್ರಾಮೀಣ ಠಾಣೆಯ ಸಿಬ್ಬಂದಿಗಳು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ 3500 ನಗದು, 3 ಮೊಬೈಲ್ ಹಾಗೂ ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮವನ್ನ ಜರುಗಿಸಲಾಗಿದೆ.