ಧಾರವಾಡ ಕಮಲಾಪುರದಲ್ಲಿ ಬಿದ್ದಿದೆ ಪುರುಷನ ಶವ: ಕೊಲೆಯಾ.. ಆತ್ಮಹತ್ಯೆಯಾ..?
1 min readಧಾರವಾಡ: ಲುಂಗಿ ಹಾಗೂ ಬಿಳಿ ಅಂಗಿಯನ್ನ ಹಾಕಿಕೊಂಡ ವ್ಯಕ್ತಿಯ ಶವವೊಂದು ಕಮಲಾಪುರ ಪ್ರದೇಶದ ಅನಾಡಗದ್ದಿ ಹತ್ತಿರ ಸಿಕ್ಕಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಮೂಡಿಸಿದ್ದರಿಂದ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ದೌಡಾಯಿಸಿದ್ದಾರೆ.
ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿಯ ಶವಕ್ಕೆ ಯಾವುದೇ ರೀತಿಯ ಗಾಯಗಳಿಲ್ಲವಾದರೂ, ಬಿದ್ದಿರುವ ರೀತಿಯೂ ಅನುಮಾನ ಮೂಡಿಸುತ್ತಿದೆ. ವ್ಯಕ್ತಿಯ ಶವವನ್ನ ನೋಡಿದಾಗ ಯಾರೋ ಮಲಗಿರುವ ಹಾಗೇ ಭಾಸವಾಗುವ ರೀತಿಯಲ್ಲಿದೆ.
ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಆಗಮಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡುತ್ತಿದ್ದಾರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದು, ಗಾಯಗಳು ಕುರುಹುಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.
ಬೇರೆ ಪ್ರದೇಶದಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ, ಇಲ್ಲಿ ತಂದು ಹಾಕಿ ಹೋಗಿದ್ದಾರೆಂಬ ಸಂಶಯವೂ ಮೂಡಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಈ ಬಗ್ಗೆ ನಿಖರವಾಗಿ ತಿಳಿಯಲಿದೆ ಎಂದು ಪೊಲೀಸರು ಅಂದಾಜು ಮಾಡಿಕೊಂಡಿದ್ದಾರೆ.