ಆಕ್ಸಿಜನ್ ಕಳಿಸಿದ ಕುವೈತ್ ಅಭಿನಂದನೆಗೆ ಅರ್ಹವಲ್ಲವೇ.. ಸಂಸದ ಜೋಶಿಯವರೇ.. ಯುವ ನಾಯಕನ ಪ್ರಶ್ನೆ…!?

ಹುಬ್ಬಳ್ಳಿ: ಅವಳಿನಗರಕ್ಕೆ ಆಕ್ಸಿಜನ್ ಪೂರೈಕೆಯಾಗಿದ್ದು ಕುವೈತ್ ನಿಂದ. ಆದರೆ, ಸಂಸದ ಪ್ರಲ್ಹಾದ ಜೋಶಿಯವರು ಕುವೈತ್ ಗೆ ಒಂದೇ ಒಂದು ಸಲ ಧನ್ಯವಾದ ತಿಳಿಸದೇ ಇರುವುದು, ಅವರ ಮನಸ್ಥಿತಿಯನ್ನ ತೋರಿಸುತ್ತದೆ ಎಂದು ಕಾಂಗ್ರೆಸ್ ನ ಯುವ ನಾಯಕ ರಜತ ಉಳ್ಳಾಗಡ್ಡಿಮಠ ಎಂದು ಹೇಳಿದ್ದಾರೆ.

ಪ್ರಲ್ಹಾದ ಜೋಶಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ತಿಳಿಸುತ್ತಾರೆ ಹೊರತಾಗಿ, ನಿಜವಾಗಿಯೂ ಸಹಾಯ ಮಾಡಿದವರಿಗೆ ಧನ್ಯವಾದ ತಿಳಿಸದೇ ಇರುವುದರಲ್ಲಿಯೂ ದಾರಿ ತಪ್ಪಿಸುವ ಮಾರ್ಗವಿದೆ ಎಂದು ರಜತ ಅಭಿಪ್ರಾಯಪಟ್ಟಿದ್ದಾರೆ.
ಆಕ್ಸಿಜನ್ ಅವಳಿನಗರಕ್ಕೆ ಎಷ್ಟು ಬೇಕೋ ಅಷ್ಟನ್ನ ಕೇಂದ್ರ ಕೊಡಬೇಕು. ಅದು ನ್ಯಾಯ ಕೂಡಾ. ಆದರೆ, ತನ್ನಿಂದ ಆಗದ ಕಾರ್ಯವನ್ನ ಕುವೈತ್ ಸಹಾಯ ಮಾಡುತ್ತಿದೆ. ಇಂತಹ ಸಮಯದಲ್ಲೂ ನರೇಂದ್ರ ಮೋದಿಯವರ ಒಲುವು ಗಳಿಸಿಕೊಳ್ಳಲು ಜೋಶಿ ಹೆಣಗಾಡುತ್ತಿದ್ದಾರೆ.

ಸಚಿವ ಪ್ರಲ್ಹಾದ ಜೋಶಿಯವರೇ ನೀವೂ ರಾಜಕೀಯ ಮಾಡುವುದನ್ನ ಬಿಡಿ. ಮೊದಲು ಜನರಿಗೆ ಬೇಕಾದ ವ್ಯವಸ್ಥೆಯನ್ನ ಮಾಡಿ ಎಂದು ರಜತ ಉಳ್ಳಾಗಡ್ಡಿಮಠ ಆಗ್ರಹಿಸಿದ್ದಾರೆ.