ಕುಸುಗಲ್, ಚೆನ್ನಾಪುರ, ಅಂಚಟಗೇರಿ, ಚೌರಗುಡ್ಡದಲ್ಲಿ ರೇಡ್- 31 ಜೂಜುಕೋರರ ಬಂಧನ…

ಹುಬ್ಬಳ್ಳಿ: ದೀಪಾವಳಿ ಸಮಯದಲ್ಲಿ ಅಂದರ್- ಬಾಹರ್ ಆಡುತ್ತಿದ್ದ ನಾಲ್ಕು ಗ್ರಾಮದಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ದಾಳಿ 31ಕ್ಕೂ ಹೆಚ್ಚು ಜೂಜುಕೋರರನ್ನ ಬಂಧಿಸಿರುವ ಘಟನೆ ನಡೆದಿದೆ.
ಖಚಿತ ಮಾಹಿತಿಯ ಮೇರೆಗೆ ಇನ್ಸ್‌ಪೆಕ್ಟರ್ ಮುರಗೇಶ ಚೆನ್ನಣ್ಣನವರ ಹಾಗೂ ಪಿಎಸ್ಐ ಸಚಿನ ಅಲಮೇಲಕರ ತಂಡವೂ ದಾಳಿ ನಡೆಸಿದೆ.
ದಾಳಿಯ ವೇಳೆಯಲ್ಲಿ 83 ಸಾವಿರ ರೂಪಾಯಿ ನಗದು ಹಾಗೂ ಇಸ್ಪೀಟ್ ಕಾರ್ಡಗಳನ್ನ ವಶಕ್ಕೆ ಪಡೆಯಲಾಗಿದೆ. ನಾಲ್ಕು ಪ್ರತ್ಯೇಕ ಪ್ರಕರಣಗಳನ್ನ ದಾಖಲು ಮಾಡಲಾಗಿದೆ.