“ಕುಸುಗಲ್-ಬೆಳಗಲಿ”ಯಲ್ಲಿ “ಮಾರುವೇಷ”ದ ದಾಳಿ- ಸಿಕ್ಕಿದ್ದು ಬರೋಬ್ಬರಿ ’21 ಆರೋಪಿಗಳು’…!
1 min readಅಂದರ್-ಬಾಹರ್ ಆಡುತ್ತಿದ್ದ ಜಾಗದಲ್ಲಿ ಮೊದಲೇ ಮಾರುವೇಷದಲ್ಲಿ ಕೂತಿದ್ದ ಪೊಲೀಸರು
ಗ್ರಾಮೀಣ ಭಾಗದಲ್ಲಿ ಹೊಸ ರೀತಿಯ ಕಾರ್ಯಾಚರಣೆಗೆ ಮುಂದಾದ ಮುರುಗೇಶ ಚೆನ್ನಣ್ಣನವರ ಟೀಂ
ಹುಬ್ಬಳ್ಳಿ: ಚಾಪೆ, ರಂಗೋಲಿ ಕೆಳಗೆ ನೂಕುವ ಆರೋಪಿಗಳನ್ನ ಹೆಡಮುರಿಗೆ ಕಟ್ಟಲು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಹೊಸದೊಂದು ಪ್ಲಾನ್ ರೂಪಿಸಿ, ಅದರಲ್ಲಿ ಯಶಸ್ವಿಯಾದ ಪ್ರಕರಣ ಬೆಳಕಿಗೆ ಬಂದಿಗೆ.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಹಾಗೂ ಡಿಎಸ್ಪಿ ನಾಗರಾಜ ಅವರ ಮಾರ್ಗದರ್ಶನದ ಮೂಲಕ ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಟೀಂ ವರ್ಕೌಟ್ ಮಾಡಿದೆ.
ಪೊಲೀಸರ ಕಣ್ಣು ತಪ್ಪಿಸಿ ಅಂದರ್-ಬಾಹರ್ ಆಡುತ್ತಿದ್ದ ಎರಡು ಗ್ರಾಮದಲ್ಲಿ ಪ್ರತ್ಯೇಕ ದಾಳಿಯು ಪಿಎಸ್ಐ ಸಚಿನ ಅಲಮೇಲಕರ ನೇತೃತ್ವದಲ್ಲಿ ನಡೆದಿದ್ದು, ಒಟ್ಟು 21 ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ 38400 ನಗದು, ಜೂಜಾಟಕ್ಕೆ ಬಳಸಿದ ಇಸ್ಪೀಟ್ ಎಲೆ ಸೇರಿದಂತೆ ಏಳು ಫೈಲ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.