‘ದಂಗಲ್ ಸಿನೇಮಾ ಲೇಡಿ ಪೈಲ್ವಾನ್’ ಸಹೋದರಿ ಆತ್ಮಹತ್ಯೆ…!
ನವದೆಹಲಿ: ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಸೋಲನ್ನು ಅನುಭವಿಸಿದ ಹಿನ್ನೆಲೆಯಲ್ಲಿ ಖ್ಯಾತ ಕುಸ್ತಿಪಟು ಗೀತಾ ಫೋಗಾಟ್ ಹಾಗೂ ಬಬಿತಾ ಫೋಗಾಟ್ ಸಹೋದರಿ ರಿತಿಕಾ ಫೋಗಾಟ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ರಿತಿಕಾಗೆ 17 ವರ್ಷ ವಯಸ್ಸಾಗಿತ್ತು. ಕುಸ್ತಿಯಲ್ಲಿ ಸೋಲನುಭವಿಸಿದ್ದಕ್ಕೆ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾರ್ಚ್ 14ರಂದು ರಾತ್ರಿ 11 ಗಂಟೆಗೆ ರಿತಿಕಾ ತಮ್ಮ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ರಾಜಸ್ಥಾನದ ಭರತಪುರದಲ್ಲಿ ಮಾರ್ಚ್ 12ರಿಂದ 14ರವರೆಗೆ ಮೂರು ದಿನಗಳ ಕಾಲ ರಾಜ್ಯ ಮಟ್ಟದ ವಿವಿಧ ವಯೋಮಾನದ ಕುಸ್ತಿ ಪಂದ್ಯಾವಳಿಯಲ್ಲಿ ರಿತಿಕಾ ಫೋಗಾಟ್ ಪಾಲ್ಗೊಂಡಿದ್ದರು. ಫೈನಲ್ ವರೆಗೂ ಹೋಗಿದ್ದ ರಿತಿಕಾ ಕೊನೆ ದಿನ ನಡೆದ ಪ್ರಶಸ್ತಿ ಸುತ್ತಿನಲ್ಲಿ ಕೇವಲ ಒಂದು ಅಂಕದಿಂದ ಸೋಲನುಭವಿಸಿದ್ದರು. ಇದರಿಂದ ಆಘಾತಕ್ಕೊಳಗಾದ ರಿತಿಕಾ ಆತ್ಮಹತ್ಯೆ ಮಾಡಿಕೊಡಿದ್ದಾರೆ.