ಕಲಘಟಗಿಯ ‘ಕುರಿ ನೀಲ’ ಇನ್ನಿಲ್ಲ: ಇನ್ನೂ ನೆನಪು ಮಾತ್ರ
ಹುಬ್ಬಳ್ಳಿ: ಕಲಘಟಗಿ ಕ್ಷೇತ್ರದಲ್ಲಿ ಪತ್ರಕರ್ತನಾಗಿ ಕಾಣಿಸಿಕೊಂಡು ರಾಜಕಾರಣಕ್ಕೆ ಧುಮುಕಿ ಎರಡು ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಮತ್ತೂ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸಿದ್ದ ನೀಲಪ್ಪ ಕುರಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಕೆಲವು ದಿನಗಳಿಂದ ಕಿಮ್ಸ್ ನ ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುರಿ ನೀಲಪ್ಪ, ಬೆಳಗಿನ ಜಾವ ಮೂರು ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಮಲಕನಕೊಪ್ಪ ಗ್ರಾಮದ ಕುರಿ ನೀಲಪ್ಪನ ಮಡಿದ ಜಿನ್ನೂರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದರು.
ನೀಲಪ್ಪ ಕುರಿ ಕೂಡಾ, ಒಂದು ಬಾರಿ ಜಿಲ್ಲಾ ಪಂಚಾಯತಿ ಚುನಾವಣೆಗೆ ನಿಂತು ಸೋಲನ್ನ ಅನುಭವಿಸಿದ್ದರು. ಶಾಸಕ ಸಂತೋಷ ಲಾಡ ಕ್ಷೇತ್ರಕ್ಕೆ ಬಂದ ನಂತರ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡು, ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಸೇರಿಕೊಂಡಿದ್ದರು.
ಕಲಘಟಗಿ ಸೇರಿದಂತೆ ಗೊತ್ತಿದ್ದ ಕೆಲವೆಡೆ ನೀಲಪ್ಪ ಕುರಿಯವರನ್ನ ಬಹುತೇಕರು ಕರೆಯುವುದು ‘ಕುರಿ ನೀಲ’ ಎಂದೇ. ಇವರ ನಿಧನಕ್ಕೆ ಕಲಘಟಗಿ ತಾಲೂಕಿನ ಪ್ರಮುಖರಾದ ರಾಮನಗೌಡ ಪಾಟೀಲ, ಮಾಜಿ ಸಚಿವ ಸಂತೋಷ ಲಾಡ ಆಪ್ತ ಸಹಾಯಕ ಹರಿಶಂಕರ, ಸೋಮಣ್ಣ, ಮಂಜುನಾಥ ಮುರಳ್ಳಿ, ನಿಂಗರೆಡ್ಡಿ ನಡುವಿನಮನಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.