ಕುಂದಗೋಳದ “ಮದುವೆಯಾದ ಜೋಡಿ”ಗೆ ಪೊಲೀಸರೇಕೆ ಬೆನ್ನು ಬಿದ್ದಿದ್ದಾರೆ…!?

ಧಾರವಾಡ: ತಾಲೂಕಿನ ಹಾಲಿ ರಾಯಾಪೂರದ ಯುವಕ ಕುಂದಗೋಳದ ಯುವತಿಯನ್ನ ಮದುವೆಯಾಗಿ ಮರಳಿ ಬರುತ್ತಿದ್ದಾಗ, ಪೊಲೀಸರು ನಾಲ್ಕೈದು ವಾಹನಗಳಿಂದ ಬೆನ್ನು ಬಿದ್ದು, ಮಧುಮಕ್ಕಳು ತಪ್ಪಿಸಿಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗಿರುವ ಘಟನೆ ಕಲಘಟಗಿ ಬಳಿ ನಡೆಯುತ್ತಿದೆ.
ಮೂಲತಃ ಕುಂದಗೋಳದ ಆನಂದ ಹಾಗೂ ಐಶ್ವರ್ಯ ಮನೆಯಿಂದ ಪರಾರಿಯಾಗಿ ಮದುವೆಯಾಗಿದ್ದಾರೆ. ಅವರ ಮದುವೆಯ ವೀಡಿಯೋ ಇದೀಗ ವೈರಲ್ ಆಗಿದೆ.
ಕಾರಿನಲ್ಲಿ ಬರುತ್ತಿದ್ದ ಇವರನ್ನ ಪೊಲೀಸರೇ ಅಡ್ಡಗಟ್ಟಿ ನಿಲ್ಲಿಸುವ ಪ್ರಯತ್ನ ನಡೆಸಿದ್ದಾರಂತೆ. ಯುವಕ ಯುವತಿಯ ವಯಸ್ಸು ಮದುವೆಯಾಗುವ ವಯಸ್ಸನ್ನ ಹೊಂದಿದ್ದಾರೆ. ಅವರೇ ಒಪ್ಪಿಕೊಂಡು ಮದುವೆಯಾಗಿದ್ದಾರೆ. ಆದರೆ, ಪೊಲೀಸರು ಇವರ ಬೆನ್ನು ಬಿದ್ದಿರುವುದು ಮಾತ್ರ ಸೋಜಿಗ ಮೂಡಿಸಿದೆ.
ಕುಂದಗೋಳ ಮೂಲದ ಆನಂದ,ಐದು ವರ್ಷದ ಹಿಂದೆ ರಾಯಾಪುರದಲ್ಲಿ ಮನೆ ಕಟ್ಟಿಸಿ ಜೀವನ ಮಾಡುತ್ತಿದ್ದ..
ಹುಡುಗಿ ಕುಂದಗೋಳ ಮೂಲದವಳು…
ಕಳೆದ ಕೆಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು…
ಮಂಗಳವಾರ ಇಬ್ಬರು ಕೂಡಾ ಓಡಿ ಹೋಗಿ ಮದುವೆ ಆಗಿದ್ದರು…
ಕಡೂರಿನ ಗುಹೆಕಲ್ಲಮ್ಮ ದೇವಸ್ಥಾನದಲ್ಲಿ ಇಬ್ಬರು ಕೂಡಾ ಮದುವೆ ಆಗಿದ್ದರು..