ಕುಂದಗೋಳ: ‘ಅಟ್ಟ’ದ ಮನೆಯಲ್ಲಿ “ಶವ”ವಾದ ‘ಆಸ್ತಿ’ವಾನ ಯುವಕ… ಕೊಲೆಯೋ… ಆತ್ಮಹತ್ಯೆಯೋ…!!!?

ಕುಂದಗೋಳ: ತನ್ನದೇ ಮನೆಯ ಅಟ್ಟದ ಮನೆಯಲ್ಲಿ ನೇಣು ಹಾಕಿಕೊಂಡ ರೀತಿಯಲ್ಲಿ ಆಸ್ತಿವಾನ ಯುವಕನೋರ್ವನ ಶವ ಕಂಡು ಬಂದಿದ್ದು, ಕೆಲವು ಭಾಗದಲ್ಲಿ ರಕ್ತ ಬಂದಿರುವುದರಿಂದ ತೀವ್ರ ಸಂಶಯಕ್ಕೆ ಕಾರಣವಾಗಿದೆ.
ಹೌದು.. ಕುಂದಗೋಳ ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ಫಕ್ಕಿರೇಶ ಹನಮಂತಪ್ಪ ತಡಸದ ಎಂಬಾತನೇ ಶವವಾಗಿ ಪತ್ತೆಯಾಗಿದ್ದು, ಗ್ರಾಮಕ್ಕೆ ಪೊಲೀಸರು ದೌಡಾಯಿಸಿದ್ದಾರೆ.
ಫಕ್ಕಿರೇಶನ ತಂದೆ ಹನಮಂತಪ್ಪ ತಡಸದ ಎರಡು ಪತ್ನಿಯರನ್ನ ಹೊಂದಿದ್ದರು. ಮೊದಲ ಪತ್ನಿ ತೀರಿಕೊಂಡಿದ್ದು ಫಕ್ಕಿರೇಶನಿಗೆ ಸುಮಾರು ಅರವತ್ತಕ್ಕೂ ಹೆಚ್ಚು ಎಕರೆ ಜಮೀನಿತ್ತು. ಯಾವುದೇ ಥರದ ಚಟವಿಲ್ಲದ ಈತ ಹೀಗೇಕೆ ಶವವಾಗಿರಬಹುದೆಂಬ ಸಂಶಯ ಹಲವರನ್ನ ಕಾಡುತ್ತಿದೆ.
ಫಕ್ಕಿರೇಶನ ಆಸ್ತಿಗಾಗಿ ಕೋರ್ಟ ವ್ಯಾಜ್ಯವೂ ನಡೆದಿತ್ತು ಎನ್ನಲಾಗಿದ್ದು, ಪೊಲೀಸರ ತನಿಖೆಯಿಂದ ನಿಜ ಸ್ವರೂಪ ಬಯಲಾಗಲಿದೆ.