ಕೊಲ್ಲಾಪುರದಲ್ಲಿ ಕದ್ದ ಲಾರಿಯನ್ನ “ಕುಂದಗೋಳ ಬಳಿ” ಪತ್ತೆ ಹಚ್ಚಿದ ‘ಸಿಪಿಐ ಮಾರುತಿ ಗುಳ್ಳಾರಿ ಟೀಂ’…

ಕುಂದಗೋಳ: ಮಹಾರಾಷ್ಟ್ರದ ಕೊಲ್ಲಾಪುರದಿಂದ ಲಾರಿಯನ್ನ ಕದ್ದು ಕುಂದಗೋಳ ಲಕ್ಷ್ಮೇಶ್ವರ ರಸ್ತೆಯ ಮೂಲಕ ಸಾಗಾಟ ಮಾಡುತ್ತಿದ್ದ ಸಮಯದಲ್ಲಿ ಕುಂದಗೋಳ ಪೊಲೀಸರು ದಾಳಿ ಮಾಡಿ, ಆರೋಪಿ ಸಮೇತ ಲಾರಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ವೃತ್ತ ನಿರೀಕ್ಷಕ ಮಾರುತಿ ಗುಳ್ಳಾರಿ ಅವರು ತಮ್ಮ ಸಿಬ್ಬಂದಿಗಳಾದ ಎಎಸ್ಐ ಎಂ.ಆರ್.ರಾಮನಾ, ಹೆಡ್ ಕಾನ್ ಸ್ಟೇಬಲ್ ಗಳಾದ ಸಿ.ಎಸ್.ಬಡಿಗೇರ, ಎಂ.ಎಸ್.ಜೋಡಗೇರಿ, ಬಿ.ಎ.ಶಿರಕೋಳ, ಸಾವಿತ್ರಿ ಶಿಂತ್ರಿ, ಪೊಲೀಸ್ ರುಗಳಾದ ಅಮರೇಶ ಬಳಗಾರ, ಪರಮೇಶ ಗೊಂದಿ, ಎಸ್.ಡಿ.ಕಳಾವಂತ ಹಾಗೂ ನಾಗರಾಜ ಹೊಸಕೇರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.