ಕುಮಾರಸ್ವಾಮಿ ಪೆನ್‌ಡ್ರೈವ್‌ನಲ್ಲಿರೋದು “ಧಾರವಾಡ ಜಿಲ್ಲೆ ಶಾಸಕ”ನ ಧ್ವನಿ…!!???

ಬೆಂಗಳೂರು: ಕಾಂಗ್ರೆಸ್ ಪಕ್ಷದ ವಿರುದ್ಧ ನಿರಂತರವಾಗಿ ಹರಿಹಾಯುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಳಿ ಇರೋದು ಧಾರವಾಡ ಜಿಲ್ಲೆಯ ಶಾಸಕರೋರ್ವರ ಧ್ವನಿ ಎಂಬ ವದಂತಿ ಹೆಚ್ಚಾಗಿದ್ದು, ಆಡೀಯೋದಲ್ಲಿ ವರ್ಗಾವಣೆಗಾಗಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ನಿಖರತೆಯಿದೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್‌ನ ಕುಮಾರಸ್ವಾಮಿಯವರು ಕಳೆದ ವಾರ ಸದನದಲ್ಲಿ ಪೆನ್ ಡ್ರೈವ್ ತೋರಿಸಿ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಪೆನ್ ಡ್ರೈವ್‌ನಲ್ಲಿ ದಾಖಲೆ ಇರುವುದಾಗಿಯೂ ಹೇಳಿದ್ದರು.
ಧಾರವಾಡ ಜಿಲ್ಲೆಯ ಶಾಸಕರೋರ್ವರು ಧಾರವಾಡ ಜಿಲ್ಲೆಯ ಪ್ರಮುಖ ಹುದ್ದೆಗೆ ವರ್ಗಾವಣೆ ಮಾಡಿಕೊಡಲು ಒಂದು ಕೋಟಿ ರೂಪಾಯಿ ಕೇಳಿದ್ದಾರಂತೆ. ಅಷ್ಟೇ ಅಲ್ಲದೇ ಮಾತನಾಡಿರುವರೆನ್ನಲಾದ ಶಾಸಕ, ತನ್ನ ಪಕ್ಷದ ಇನ್ನುಳಿದ ಶಾಸಕರಿಗೆ ಎಷ್ಟೇಷ್ಟು ಕೊಡಬೇಕು ಎಂಬುದನ್ನೂ ಮಾತಾಡಿದ್ದಾರಂತೆ. ಅದೇ ಆಡೀಯೋ ಕುಮಾರಸ್ವಾಮಿ ಬಳಿ ಇದೆ ಎಂಬ ದಟ್ಟ ವದಂತಿ ಹಬ್ಬಿದೆ.
ಈ ಬಗ್ಗೆ ಸ್ವತಃ ಕುಮಾರಸ್ವಾಮಿ ಅವರು ಸ್ಪಷ್ಟತೆ ನೀಡಬೇಕು. ಪೆನ್‌ಡ್ರೈವ್‌ನಲ್ಲಿ ಇರೋದು ಏನು ಎಂಬ ಸತ್ಯವನ್ನ ಹೊರ ಹಾಕಬೇಕಿದೆ.