ಡಂಬಾಚಾರದ ಪ್ಯಾಕೇಜ್: ಅಪಸ್ವರ ಎತ್ತಿದರೇ ದೇಶದ್ರೋಹಿ ಎಂದು ಬಿಂಬಿಸ್ತೀರಿ: ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ
1 min readಬೆಂಗಳೂರು: ದೇಶದ ೧೦% ಜಿಡಿಪಿ ಹಣವನ್ನ ಪ್ಯಾಕೇಜ್ ಘೋಷಿಸಿದ್ದಾರೆ. ಮೇ೧೩ ರ ಪ್ಯಾಕೇಜ್ ೬ ಲಕ್ಷದ ೫೪ ಸಾವಿರ ಕೋಟಿ ಪ್ಯಾಕೇಜ್. ಪ್ಯಾಕೇಜ್ ಘೋಷಣೆ ನಂತರ ನಾಲ್ಕು ದಿನ ವಿವರಣೆ. ಈ ಪ್ಯಾಕೇಜ್ ನಿಂದ ಪರಿಹಾರ ಸಿಗಲಿದೆ ಅಂದುಕೊಂಡಿದ್ದೆ. ಆದರೆ ಪ್ಯಾಕೇಜ್ ಗಮನಿಸಿದಾಗ ಏನೇನೂ ಇಲ್ಲ. ೪೫ ಲಕ್ಷ ಎಂಎಸ್ ಎಂಇಗಳಿಗೆ ಪ್ಯಾಕೇಜ್ ನೀಡಿದ್ದಾರೆ. ಜಿಡಿಪಿಯಲ್ಲಿ ಒಂದು ಪರ್ಸೆಂಟ್ ಅಷ್ಟೇ ಈ ಪ್ಯಾಕೇಜ್ ಎಂದು ಕೇಂದ್ರದ ೨೦ ಲಕ್ಷ ಕೋಟಿ ಪ್ಯಾಕೇಜ್ ಗೆ ಹೆಚ್ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸರ್ಕಾರ ನಿರ್ಧಾರ ತೆಗೆದುಕೊಳ್ಳೋಕೆ ಹಲವರು ಸಲಹೆ ನೀಡ್ತಾರೆ. ಸಲಹೆಗಳ ಆಧಾರದ ಮೇಲೆಯೇ ಸರ್ಕಾರ ನಿರ್ಧರಿಸುತ್ತೆ. ಸೀತಾರಾಮನ್ ತೆಗೆದುಕೊಂಡ ನಿರ್ಧಾರ ಪಾರದರ್ಶಕವಾಗಿಲ್ಲ. ನಾನು ನಾಲ್ಕು ದಿನ ಸೀರಿಯಲ್ ರೀತಿ ಟಿವಿ ವೀಕ್ಷಿಸಿದ್ದೆ. ಸೀತಾರಾಮನ್ ಅವರ ಪ್ಯಾಕೇಜ್ ಘೋಷಣೆ ವೀಕ್ಷಿಸಿದ್ದೆ. ಯಾರ ಸಲಹೆಯಂತೆ ಪ್ಯಾಕೇಜ್ ಘೋಷಿಸಿದ್ರೋ ಗೊತ್ತಿಲ್ಲ. ಯಾರಾದ್ರೂ ಇದಕ್ಕೆ ಅಪಸ್ವರ ಎತ್ತಿದ್ರೆ ದೇಶದ್ರೋಹಿಗಳು ಅಂತತ ಬಿಂಬಿಸುತ್ತಾರೆಂದು ಆರೋಪಿಸಿದರು.
ಈ ಸಂದರ್ಭಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದಕ್ಕೆ ನಾನು ಇಷ್ಟ ಪಡಲ್ಲ. ಪ್ರಧಾನಿ ಅಷ್ಟು ಹಣ ಕೊಟ್ರು ಇಷ್ಟು ಹಣ ಕೊಟ್ರು ಅಂತ ದೇಶ ವಿದೇಶಗಳಲ್ಲಿ ಹೊಗಳಿಕೆ ಇದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ನಾನು ಸಂತಸ ವ್ಯಕ್ತಪಡಿಸುತ್ತೇನೆ ನಮ್ಮ ದೇಶದ ಪ್ರಧಾನಿ ಬಗ್ಗೆ ಹೀಗೆ ಪ್ರತಿಕ್ರಿಯೆ ಬರ್ತಿದೆ ಅಂತ. ನೋಟ್ ಬ್ಯಾನ್ ಆದ್ಮೇಲೆ ಸಣ್ಣ ಉದ್ಯಮ ನೆಲಕಚ್ಚಿತ್ತು. ಸಂಸ್ಥೆಗಳು ಆರ್ಥಿಕ ದಿವಾಳಿತನಕ್ಕೊಳಗಾಗಿದ್ದವು. ಉದ್ಯಮಗಳ ದಿವಾಳಿತನದಿಂದ ಬ್ಯಾಂಕುಗಳು ಆರ್ಥಿಕವಾಗಿ ಕುಸಿತಗೊಂಡವು ಇದನ್ನ ಸರಿಪಡಿಸೋಕೆ ಈ ಪ್ಯಾಕೇಜ್