ಕುಮಾರ ಪಾಟೀಲನಿಂದ ನೀರಲಗಿಯವರಿಗೆ ಕೊಡಲಿಯೇಟು: ಹಾಡುಹಗಲೇ ಧಾರವಾಡದಲ್ಲಿ ಘಟನೆ

ಧಾರವಾಡ: ಭಾರತೀಯ ಜನತಾ ಪಕ್ಷದ ಮುಖಂಡನಿಗೆ ನವನಿರ್ಮಾಣ ಸೇನೆಯ ಮುಖಂಡನೋರ್ವ ಥಳಿಸಿರುವ ಘಟನೆ ಧಾರವಾಡದ ಸಾರಸ್ವತಪುರದಲ್ಲಿ ನಡೆದಿದೆ.
ಧಾರವಾಡದ ವೀರಭದ್ರಶ್ವರ ಇನ್ಪ್ರಾಸ್ರ್ಟಕ್ಷನ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ನಾಗನಗೌಡ ಪಾಟೀಲ ನೀರಲಗಿ ಮೇಲೆ ನವನಿರ್ಮಾಣ ಸೇನೆಯ ಅಧ್ಯಕ್ಷ ಕುಮಾರ ಪಾಟೀಲ ಎಂಬುವವರು ಹಲ್ಲೆ ಮಾಡಿದ್ದಾರೆಂದು ದೂರು ನೀಡಲಾಗಿದೆ.
ತಮ್ಮ ಮೇಲೆ ಕೊಡಲಿಯಿಂದ ಹಲ್ಲೆ ಮಾಡಲಾಗಿದ್ದು, ಕೊಲೆ ಮಾಡುವ ಉದ್ದೇಶದಿಂದ ಬಂದಿದ್ದರೆಂದು ನಾಗನಗೌಡ ನೀರಲಗಿ ದೂರಿದ್ದು, ಸದ್ಯ ನಾಗನಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನವಲಗುಂದ ತಾಲೂಕಿನ ಮೊರಬ ಗ್ರಾಮದ ಕುಮಾರ ಪಾಟೀಲ, ಪ್ರಮುಖ ರಾಜಕಾರಣಿಯೋರ್ವರ ಕುಮ್ಮಕ್ಕಿನಿಂದಲೇ ತಮ್ಮ ಕಚೇರಿಗೆ ಬಂದು ಹೀಗೆ ಮಾಡಿದ್ದಾರೆಂದು ನೀರಲಗಿ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.