Posts Slider

Karnataka Voice

Latest Kannada News

ಎಲ್ಲ ಲಾಬಿಗಳ ನಡುವೆ ‘ಕೆ.ಬಿ.ಗುಡಸಿ’ ಕವಿವಿ ‘ಕುಲಪತಿ’ ನೇಮಕ

Spread the love

ಧಾರವಾಡ: ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಇಲ್ಲಿನ ಕರ್ನಾಟಕವ ವಿಶ್ವವಿದ್ಯಾಲಯದ ಖಾಯಂ ಕುಲಪತಿಯ ಆಯ್ಕೆಗೆ ಇಂದು ತೆರೆ ಬಿದ್ದಿದೆ. ಹಲವು ಕುತೂಹಲಗಳಿಂದ ಕೂಡಿದ್ದ ಕುಲಪತಿಗಳ ಆಯ್ಕೆ ಒಂದಿಲ್ಲೊಂದು ವಿವಾದದಿಂದಾಗಿ ಹಿಂದುಳಿದಿತ್ತು.

ಜಾತಿಯ ಸೋಂಕು, ಆಯ್ಕೆಯಲ್ಲಿ ಲಾಬಿ ರಾಜಕಾರಣ ಸೇರಿದಂತೆ ಖಾಯಂ ಕುಲಪತಿಯ ನೇಮಕ ಕಗ್ಗಂಟಾಗಿಯೇ ಉಳಿದಿತ್ತು. ಆದರೆ ಇದೀಗ ರಾಜ್ಯಪಾಲರ ಕಛೇರಿಯಿಂದ ಹೋರ ಬಿದ್ದಿದೆ ಎನ್ನಲಾದ ಆದೇಶ ಪ್ರತಿಯೊಂದರ ಅನ್ವಯ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಹಳ ಆಯ್ಕೆಗೆ ನೇಮಿಸಿದ್ದ ಆಯ್ಕೆ ಸಮಿತಿಯ ವರದಿಯನ್ನು ಆಧರಿಸಿ ಇಂದು ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೋ. ಕೆ.ಬಿ.ಗುಡಸಿ ಯವರನ್ನು ಮುಂದಿನ ನಾಲ್ಕು ವರ್ಷಗಳ ಕಾಲ ಕವಿವಿಯ ಕುಲಪತಿಯನ್ನಾಗಿ  ನೇಮಿಸಿರುವ ಕುರಿತು ಆದೇಶ ಹೊರಬಂದಿದೆ.

ಈ ಹುದ್ದೆಗೆ ಒಟ್ಟು 96 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಅರ್ಹತೆಗಳನ್ನು ಆಧರಿಸಿ 25 ಜನರನ್ನು ಅನರ್ಹರೆಂದು ತಿರಸ್ಕರಿಸಲಾಗಿತ್ತು. ಉಳಿದವರಲ್ಲಿ 3 ಜನರ ಹೆಸರನ್ನು  ಶೋಧನಾ ಸಮಿತಿಯು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಅಂತಿಮವಾಗಿ ಕಳೆದ 15 ತಿಂಗಳುಗಳಿಂದ ಖಾಲಿ ಇರುವ ಕವಿವಿಯ ಕುಲಪತಿ ಕುರ್ಚಿಗೆ ಹಿಡಿದಿದ್ದ ಗ್ರಹಣ ಇಂದು ಸರಿದಂತಾಗಿದೆ.

ಪ್ರೊ. ಕೆ.ಬಿ.ಗುಡಸಿ ಪ್ರಸ್ತುತ ಕವಿವಿ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾಗಿದ್ದರು. ತಮ್ಮ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ನಾಡಿನ ಜನರ ಮೆಚ್ಚುಗೆಯನ್ನು ಗಳಿಸಿದ್ದರು.

ವಿಜ್ಞಾನ ಕೇಂದ್ರಕ್ಕೆ ಜನಪ್ರಿಯತೆಯನ್ನು ತಂದುಕೊಟ್ಟ ಪ್ರೊಫೆಸರ್

ಸಮರ್ಥ ಆಡಳಿತಗಾರರಾಗಿ ಅವರು ವಿಜ್ಞಾನ ಕೇಂದ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರು ಬಂದ ನಂತರ ಜನ ಸಾಮಾನ್ಯರಿಗೆ ವಿಜ್ಞಾನವನ್ನು ತಲುಪಿಸುವ ಕಾರ್ಯಕ್ಕೆ ಬಲ ದೊರೆತಿತ್ತು.
ಸ್ವತಃ ಒಬ್ಬ ವಿಜ್ಞಾನಿಯಾಗಿದ್ದರೂ ತಮ್ಮ ಈ ಕಾರ್ಯಾವಧಿಯಲ್ಲಿ ಅವರು ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಶಿಕ್ಷಕರು, ವಿದ್ಯಾರ್ಥಿಗಳ ಜೊತೆ ಸೇರಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕೀರ್ತಿಯನ್ನು ಬಾನೆತ್ತರಕ್ಕೆ ಕೊಂಡೊಯ್ದಿದ್ದರು.
ಅವರು ಇತ್ತಿಚಿಗೆ ಆಯೋಜಿಸಿದ್ದ ವಿಜ್ಞಾನ ಸಮ್ಮೇಳನ , ಸೇರಿದಂತೆ ವಿಜ್ಞಾನ ಮತ್ತು ಧರ್ಮದ ಕುರಿತು ಆಯೋಜಿಸಿದ್ದ ಚಿಂತನ ಮಂಥನ ಕಾರ್ಯಕ್ರಮಗಳ ಮೂಲಕ ಪ್ರಾದೇಶಿಕ ವಿಜ್ಞಾನ ಕೇಂದ್ರ ಧಾರವಾಡದ ಹೆಸರನ್ನು ನಾಡಿನೆಲ್ಲೆಡೆ ಪಸರಿಸುವಂತೆ ಮಾಡಿದ್ದರು. ಅವರ ಆಡಳಿತ ಶೈಲಿ ಅವರ ವಾಕ್ ಚಾತುರ್ಯ, ಅವರ ವಿಶಿಷ್ಟ ಕನ್ನಡ ಮಾತನಾಡುವ ಪರಿ, ಎಲ್ಲವೂ ವಿಜ್ಞಾನ ಕೇಂದ್ರಕ್ಕೆ ಬೇಟಿ ನೀಡಿದವರನ್ನು ಆಕರ್ಶಿಸಿದ್ದವು.
ಪ್ರೊ. ಗುಡಸಿ ಅವರ ನೇತ್ರತ್ವದಲ್ಲಿ ವಿಜ್ಞಾನ ಕೇಂದ್ರದಲ್ಲಾದ ಬದಲಾವಣೆಗಳು ಮತ್ತು ನಾವೀನ್ಯತೆಯಿಂದಾಗಿ ಧಾರವಾಡದಲ್ಲಿ ಮತ್ತೊಂದು ಪ್ರವಾಸಿಗರನ್ನು ಆಕರ್ಶಿಸುವ ತಾಣವಾಗಿ ವಿಜ್ಞಾನ ಕೇಂದ್ರ ಮನ್ನಣೆಗಳಿಸಿರುವುದು ವಿಶೇಷ.

ಇಂದು ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಡಾ.ಕೆ ಬಿ ಗೂಢಸಿ ಅವರು ನೇಮಕ ಆಗಿದ್ದಾರೆ…ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇರುವ `#ಅಮರ್_ಜವಾನ’ ಸ್ಮಾರಕಕ್ಕೆ ನಮನ ಸಲ್ಲಿಸುವ ಮುಖಾಂತರ ಅಧಿಕಾರ ವಹಿಸಿಕೊಂಡು #ರಾಷ್ಟ್ರೀಯತೆ ಮೆರೆದ ಕರ್ನಾಟಕ ರಾಜ್ಯದ ಮೊದಲ ಕುಲಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.. ಸಿಂಡಿಕೇಟ್ ಸದಸ್ಯರಾದ ರವಿ ಮಾಳಗೇರ, ಅಧ್ಯಕ್ಷ ಅಮಿತ್ ಶಿಂಧೆ, ಡಾ.ಶಿವು ಭಜಂತ್ರಿ , ಡಾ. ಕಿರಣ್ ಹೊಂಬಾಳ, ಡಾ. ಸಂತೋಷ್ ಉಪಸ್ಥಿತರಿದ್ದರು…

                          ಧನ್ಯವಾದಗಳೊಂದಿಗೆ

ಮಂಜು ಹೊಂಗಲದ
ಗೌರವಾಧ್ಯಕ್ಷರು,
ಕರ್ನಾಟಕ ವಿಶ್ವವಿದ್ಯಾಲಯ
ಸಂಶೋಧನಾ ವಿದ್ಯಾರ್ಥಿಗಳ ಸಂಘ
ಧಾರವಾಡ


Spread the love

Leave a Reply

Your email address will not be published. Required fields are marked *