ಧಾರವಾಡ-ನವಲಗುಂದ ಬಸ್‌ನ ಕತ್ತರಿಸಿದ “ಚಕ್ರ”- 35ಕ್ಕೂ ಹೆಚ್ಚು ಪ್ರಯಾಣಿಕರು ಬಚಾವ್… Exclusive Video

ಧಾರವಾಡ: ನಗರದಿಂದ ನವಲಗುಂದಕ್ಕೆ ಹೊರಟಿದ್ದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಚಕ್ರವೊಂದು ಕತ್ತರಿಸಿ 500 ಮೀಟರ್ ದೂರ ಹೋಗಿ ಬಿದ್ದ ಸಮಯದಲ್ಲಿ, ಚಾಲಕನ ಸಮಯಪ್ರಜ್ಞೆ 35ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ಉಳಿಸಿದ ಘಟನೆ ನವಲಗುಂದ ಸಮೀಪ ನಡೆದಿದೆ.
ಎಕ್ಸಕ್ಲೂಸಿವ್ ವೀಡಿಯೋ…
ನವಲಗುಂದ ಡಿಪೋಗೆ ಸೇರಿದ ಬಸ್ ಗುಡುಗು ಮತ್ತು ಮಳೆ ರಭಸದ ನಡುವೆ ಮುಂದಿನ ಚಕ್ರ ಕತ್ತರಿಸಿದೆ. ಸುಮಾರು 500 ಮೀಟರ್ ದೂರಕ್ಕೆ ಹೋಗಿದೆ. ಚಾಲಕನ ಚಾಕಚಕ್ಯತೆ ದೂರದೃಷ್ಠಿಯಿಂದ ಸಂಭವಿಸಬೇಕಾಗಿದ್ದ ಅನಾಹುತ ತಪ್ಪಿ ಹಲವು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಾಲಕ ಶರೀಫ ಹಂಚಿನಾಳ ಮೂಲತಃ ನವಲಗುಂದ ತಾಲೂಕಿನ ಶಲವಡಿ ಗ್ರಾಮದವರಾಗಿದ್ದು, ಚಾಲಕನ ಕಾರ್ಯ ತೀವ್ರ ಮೆಚ್ಚುಗೆಗೆ ಕಾರಣವಾಗಿದೆ.