KSRTC ಸಂಚಾರಿ ನಿರೀಕ್ಷಕ ಕೊರೋನಾಗೆ ಬಲಿ: ಹುಬ್ಬಳ್ಳಿ-ಧಾರವಾಡದಲ್ಲೂ ಕಂಡಕ್ಟರ್ ಆಗಿದ್ದರು..!
1 min readಶಿವಮೊಗ್ಗ: ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕೆಎಸ್ಸಾರ್ಟಿಸಿ ಸಂಚಾರಿ ನಿರೀಕ್ಷಕರೋರ್ವರು ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ಸಿಎಂ ಯಡಿಯೂರಪ್ಪ ತವರೂರಲ್ಲೇ ನಡೆದಿದೆ.
ಹಾವೇರಿ ಡಿವಿಜನ್ ದಲ್ಲಿ ಕಂಡಕ್ಟರ್ ಆಗಿ ಸೇವೆ ಆರಂಭಿಸಿದ್ದ ನಾಗೇಂದ್ರಪ್ಪ ಡಿ.ಈ ಅನ್ನೋರೆ ಕೋವಿಡ್-19 ನಿಂದ ಇಂದು ಬೆಳಗಿನ ಜಾವ ಖಾಸಗಿ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಾರೆ.
ಮೂಲತಃ ಶಿವಮೊಗ್ಗ ತಾಲೂಕಿನ ನಾಗೇಂದ್ರಪ್ಪ, ಹುಬ್ಬಳ್ಳಿ, ಧಾರವಾಡ, ಹಾವೇರಿ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದರು. ಇನ್ನೇನು ಎರಡು ವರ್ಷ ನಿವೃತ್ತಿ ಬರುತ್ತೆ ಅಂದುಕೊಂಡು ತಮ್ಮೂರಿನತ್ತ ವರ್ಗಾವಣೆಯಾಗಿದ್ದರು.
ಎರಡು ಗಂಡು ಮಕ್ಕಳನ್ನೂ ಹೊಂದಿರುವ ನಾಗೇಂದ್ರಪ್ಪ, ಕರ್ತವ್ಯ ಸಲ್ಲಿಸುವ ಎಲ್ಲ ಊರುಗಳಲ್ಲಿ ಒಳ್ಳೆಯ ಬಾಂಧವ್ಯವವನ್ನ ಬೆಸೆದುಕೊಂಡು ಬಂದಿದ್ದರು. ಡಿಪೋದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾಗಲೇ ಕೋವಿಡ್-19 ದೃಢಪಟ್ಟಿದ್ದರಿಂದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ನಂತರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅಲ್ಲಿಯೂ ಕೂಡಾ ಚಿಕಿತ್ಸೆ ಫಲಿಸಿಲ್ಲ.
ನಾಗೇಂದ್ರಪ್ಪ ಅವರ ಸಾವಿನ ಸುದ್ದಿ ಅವರ ಆಪ್ತರಲ್ಲಿ ತೀವ್ರ ನೋವನ್ನ ಮೂಡಿಸಿದೆ. ಸದಾಕಾಲ ನಗು ನಗುತ್ತಲೇ ಜೀವನ ಸಾಗಿಸಿ, ಎಲ್ಲರೊಂದಿಗೂ ಬೆರೆಯುತ್ತಿದ್ದವರು ಈಗಿಲ್ಲ ಎನ್ನುವುದನ್ನ ಅರಗಿಸಿಕೊಳ್ಳುವುದು ಕಷ್ಟ ಎನ್ನುವಂತಾಗಿದೆ.