ನಾಳೆ ಬಂದ್: ಕೆಎಸ್ಸಾರ್ಟಿಸಿ ಬಸ್ ಬಂದ್ ಇರಲ್ಲ
ಬೆಂಗಳೂರು: ಸಾರಿಗೆ ಸಂಸ್ಥೆಯ ಬಸ್ ಸಂಚಾರ ಯಾವುದೇ ರೀತಿಯಲ್ಲಿ ಬಂದ್ ಇರುವುದಿಲ್ಲ ಎಂದು ಕೆಎಸ್ಸಾರ್ಟಿಸಿ ಹೇಳಿಕೊಂಡಿದೆ.
ನಾಳೆ ಬೆಳಿಗ್ಗೆಯಿಂದ ರೈತರ ಬೆಂಬಲಕ್ಕಾಗಿ ಹಲವೂ ಸಂಘಟನೆಗಳು ಬೆಂಬಲ ನೀಡಿದ್ದು, ಬಹುತೇಕವಾಗಿ ಸಂಪೂರ್ಣ ಬಂದ್ ಆಗಲಿದೆ. ಆದರೆ, ಕೆಎಸ್ಸಾರ್ಟಿಸಿ ಮಾತ್ರ ಬಸ್ ಸಂಚಾರದಲ್ಲಿ ವ್ಯತ್ಯಯ ಆಗುವುದಿಲ್ಲವೆಂದು ಹೇಳಿದೆ.
ಈ ಬಗ್ಗೆ ಸಂಸ್ಥೆ ಹೀಗೆ ಹೇಳಿಕೊಂಡಿದೆ..
ನಾಳೆಯ ಬಂದ್ ಗೆ ಸಂಬಂಧಪಟ್ಟಂತೆ, ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ, ಎಂದಿನಂತೆ ಕಾರ್ಯಾಚರಣೆ ಇರಲಿದೆ.
ಪ್ರಯಾಣಿಕರಲ್ಲಿ ಯಾವುದೇ ಗೊಂದಲ ಹಾಗೂ ಆತಂಕ ಬೇಡ.
ಸಾರಿಗೆ ವ್ಯವಸ್ಥೆಯು ಅಗತ್ಯ ಸೇವೆಯಾಗಿರುವುದರಿಂದ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ, ಪ್ರಯಾಣಿಕರ ಬೇಡಿಕೆ ಹಾಗೂ ಅಗತ್ಯನುಸಾರ ಬಸ್ಸುಗಳ ಕಾರ್ಯಾಚರಣೆಯನ್ನು ಮಾಡಲಾಗುವುದು.