ವಿಕಲಚೇತನರ ಬಸ್ ಪಾಸ್ ವಿತರಣೆ ದಿನಾಂಕ ವಿಸ್ತರಣೆ…!
1 min readಬೆಂಗಳೂರು: ವಿಕಚೇತನರ ಬಸ್ ಪಾಸ್ ವಿತರಿಸುವ ಸಂಬಂಧ ವಿಕಲಚೇತನರು ನಡೆಸಿದ ಹೋರಾಟಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವೂ, ಸ್ಪಂದಿಸಿದ್ದು, ಪಾಸ್ ವಿತರಣೆಯ ದಿನಾಂಕವನ್ನ ವಿಸ್ತರಿಸಿದೆ.
ಕಳೆದ ವಾರವೇ ಹೋರಾಟ ಮಾಡಿ ಮನವಿ ಸಲ್ಲಿಸಿದ್ದ ವಿಕಲಚೇತನರು, ಬಸ್ ವಿತರಣೆಯ ದಿನಾಂಕ ಮುಗಿದರೂ, ಎಲ್ಲರೂ ಪಾಸ್ ತೆಗೆದುಕೊಳ್ಳುವುದು ಕಷ್ಟಸಾಧ್ಯ. ಹಾಗಾಗಿ, ದಿನಾಂಕವನ್ನ ವಿಸ್ತರಣೆ ಮಾಡಬೇಕೆಂದು ಮನವಿ ಮಾಡಿದ್ದರು.
ಈಗಿರುವ ಪಾಸ್ ಗಳನ್ನ ಮಾರ್ಚ 31ರ ವರೆಗೆ ವಿಸ್ತರಣೆ ಮಾಡಿಯೂ ಆದೇಶ ಮಾಡಲಾಗಿದ್ದು, ವಿಕಲಚೇತನರು ಅಲ್ಲಿಯವರೆಗೆ ಹಳೇಯ ಪಾಸ್ ನ್ನ ಬಳಕೆ ಮಾಡಿಕೊಳ್ಳಬಹುದಾಗಿದೆ.
ಬರುವ ಮಾರ್ಚನಲ್ಲಿ ಪಾಸ್ ಗಳನ್ನ ಮಾಡಿಸಿಕೊಳ್ಳುವುದು ಉತ್ತಮವಾಗಿದ್ದು, ತಾತ್ಕಾಲಿಕ ತೊಂದರೆಗೆ ಕಡಿವಾಣ ಹಾಕಿದಂತಾಗಿದೆ.