Posts Slider

Karnataka Voice

Latest Kannada News

ನಮ್ಮಿಂದ ಗೊತ್ತಾದವರು KSPSTAಗೆ ಹೋಗಿದ್ದಾರೆ… ಪೋಸ್ಟರ್, ಬ್ಯಾನರ್ ಮಾಡಿದ್ದು ನಾವೇ….!

Spread the love

ಹುಬ್ಬಳ್ಳಿ: ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ಮಂಜುಳಾ ಅವರನ್ನ, ತಮ್ಮ ಸಂಘದ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರು ಹೇಳಿದ್ದಾರೆ.

ಮಂಜುಳಾ ಬಿ. ಅವರು ಯಾರೆಂದು ಗೊತ್ತಾಗಿದ್ದು ನಮ್ಮ ಸಂಘದಿಂದಲೇ. ಅವರನ್ನ ತಮ್ಮ ಸಂಘದಿಂದ ಬಿಡಿಸಿ ತಮ್ಮದೊಂದೆ ಸಂಘವನ್ನ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುಂದಾಗಿದೆ. ಇದಕ್ಕೇಲ್ಲ ಸಂಘ ಯಾವುದೇ ರೀತಿಯಿಂದ ಹಿಂಜರಿಯುವ ಪ್ರಶ್ನೆಯಿಲ್ಲವೆಂದು ಲತಾ ಮುಳ್ಳೂರು ಹೇಳಿದರು.

ವೈರಲ್ ಆಗಿರೋ ಸಂದೇಶ..

ಶ್ರೀಮತಿ ಮಂಜುಳ. ಬಿ. ಯವರು ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದರು ಇರುವ ತನಕ ನಮಗೆ ಎಲ್ಲಾ ರೀತಿಯ ಸಹಕಾರ ನೀಡಿದರು , ಪ್ರತಿ ತಾಲೂಕು/ ಜಿಲ್ಲೆಯ  ಬ್ಯಾನರ್ ನಲ್ಲಿ ಅವರ ಹೆಸರು & ಭಾವಚಿತ್ರ ಇರುತ್ತಿತ್ತು ಇದರಿಂದ ಇಡೀ ರಾಜ್ಯದಲ್ಲಿ ಅವರ ಹೆಸರು ಪರಿಚಯವಾಗಿತ್ತು  ಇದೀಗ ಅವರು KSPSTA ಗೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ Kspsta ಯಲ್ಲಿ ಅವರು ಮೂಲೆಗುಂಪಾಗದೇ ಯಾವತ್ತೂ ಮುಖ್ಯವಾಹಿನಿಯಲ್ಲಿ ಅವರು ಇರಲಿ ಎಂದು ಆಶಿಸುತ್ತಾ ನಮ್ಮ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ ಇದೀಗ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಭಾರೀ ಪೈಪೋಟಿ ಇದೆ ನಮ್ಮ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಆ ಸ್ಥಾನಕ್ಕೆ ಅರ್ಹ ಶಿಕ್ಷಕಿಯನ್ನು ಆಯ್ಕೆ ಮಾಡಲಾಗುವುದು.

ಮಂಜುಳಾ. ಬಿ ಅವರು ಹೇಳಿದ್ದು…

ನಾನು ಅಧಿಕಾರದ ಹಿಂದೆ ಹೋಗಿಲ್ಲ. ನಾನು ಸಂಘಕ್ಕೆ ರಾಜೀನಾಮೆ ಕೊಟ್ಟಿದ್ದೇನೆ..


Spread the love

Leave a Reply

Your email address will not be published. Required fields are marked *