ಗ್ರಾಮ ಪಂಚಾಯತಿಗೆ ಸದಸ್ಯರ ನೇಮಕ: ಸರಕಾರ ಇನ್ನೂ ತೀರ್ಮಾನ ಮಾಡಿಲ್ಲ: ಸಚಿವ ಈಶ್ವರಪ್ಪ
1 min readಹುಬ್ಬಳ್ಳಿ: ಈ ಸಂಕಷ್ಟದ ಸಮಯದಲ್ಲಿ ಬಡವರಿಗೆ ನರೇಗಾ ಕೆಲಸ ನೀಡುತ್ತಿದ್ದೇವೆ. ರಾಜ್ಯದ 6021 ಪಂಚಾಯತ್ ಗಳಲ್ಲಿ ಕೆಲಸ ಆರಂಭವಾಗಿದೆ. ಅದೇ ರೀತಿ ಧಾರವಾಡ ಜಿಲ್ಲೆಯ 144 ಗ್ರಾಮ ಪಂಚಾಯತ್ ನಲ್ಲೂ ಕೆಲಸ ನಡೆಯುತ್ತಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು.
ತಮ್ಮ ಇಲಾಖೆಯಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, 5 ಎಕರೆ ಒಳಗಡೆ ಇರೋ ಸಣ್ಣ ರೈತನಿಗೆ ಸರ್ಕಾರದಿಂದ ನೇರ ನಗದು ಸಹಾಯ ಮಾಡುತ್ತಿದ್ದೇವೆ. ಅನೇಕ ಯೋಜನೆಗಳಲ್ಲಿ ಸಹಾಯ ಮಾಡುತ್ತಿದ್ದೇವೆ. ಹಿಂದಿನ ಸರ್ಕಾರದಲ್ಲಿ ಬಹಳ ಬಾಕಿಯಿತ್ತು. ಇವಾಗ ಎಲ್ಲ ಸಮಸ್ಯೆ ಬಗೆಹರಿದಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಯಾವ ಅನುದಾನವೂ ವಾಪಸ್ ಹೋಗೋದಿಲ್ಲವೆಂದರು.
ಗ್ರಾಮ ಪಂಚಾಯತ್ ಚುನಾವಣೆ ವಿಚಾರ:
ನಂಗೆ ಕಾಂಗ್ರೆಸ್ ನವರ ಆರೋಪ ಆಶ್ಚರ್ಯ ಆಗುತ್ತೆ. ಕೊವೀಡ್-19 ನ ಸಂದರ್ಭದಲ್ಲಿ ಚುನಾವಣೆ ನಡೆಸಬೇಕಾ ಅನ್ನೋ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ಸಂಪುಟ ಸಭೆ ಮಾಡಿ ಫೈನಲ್ ಮಾಡುತ್ತೇವೆ. ಹಿಂದೆ ಶಿವಮೊಗ್ಗ ನಗರಸಭೆಯಲ್ಲಿ ಅವರು ಏನ್ ಮಾಡಿದ್ರು. ನಮ್ಮ ಪಕ್ಷದ ಸಿಂಬಲ್ ಮೇಲೆ ಗೆದ್ರು, ಅದನ್ನ ಕ್ಯಾನ್ಸಲ್ ಮಾಡಿ ಅವರ ಪಕ್ಷದ ಕಾರ್ಯಕರ್ತರನ್ನ ಸದಸ್ಯರನ್ನ ಮಾಡಿಲ್ವಾ. ನಮ್ಮ ಮುಂದೆ ಮೂರು ಆಯ್ಕೆಗಳಿವೆ ಸಧ್ಯ ಇರೋ ಸದಸ್ಯರನ್ನ ಮುಂದುವರೆಸುವುದೋ, ನಾಮನಿರ್ದೆಶನ, ಆಡಳಿತ ಕಮೀಟಿ ಮಾಡಬೇಕೋ ಎನ್ನೋ ಆಯ್ಕೆಗಳಿವೆ. ಅದನ್ನ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತೆ. ಈಗಾಗಲೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಏಲೆಕ್ಷನ್ ಯಾವಾಗ ಆದ್ರು ಕೂಡಾ ನಾವು ಸಿದ್ದರಿದ್ದೇವೆ ಎಂದರು.