ಧಾರವಾಡ: ಕೃಷಿ ಮೇಳ ಆರಂಭಕ್ಕೆ ಮೊದಲ ದಿನವೇ “ಸಾವಿನ ಪಣೂತಿ”…

ಧಾರವಾಡ: ಇಂದಿನಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಆರಂಭವಾಗಲಿರುವ ಕೃಷಿ ಮೇಳದಲ್ಲಿ ಮೊದಲ ದಿನವೇ ಅವಘಡವೊಂದು ನಡೆದಿದ್ದು, ಖಾಸಗಿ ಕಂಪನಿಯ ನೌಕರನ ಪ್ರಾಣ ಹೋಗಿದೆ.
ತುಮಕೂರು ಜಿಲ್ಲೆಯ ವನಸಗೇರೆ ಗ್ರಾಮದ 58 ವಯಸ್ಸಿನ ಪರಶುರಾಮ ಆರ್ ಎಂಬುವವರೇ ಅವಘಡದಲ್ಲಿ ಸಾವನ್ನಪ್ಪಿದ್ದು, ವಿಎಸ್‌ಟಿ ಕಂಪನಿಯ ACE ಹೆಸರಿನ ಟ್ರ್ಯಾಕ್ಟರ್ ಇಳಿಸುವಾಗ ಘಟನೆ ನಡೆದಿದೆ.
https://www.instagram.com/reel/DOhvXHCCAb4/?igsh=MW9pdXhteHQwejZtNA==
ಕೃಷಿ ಮೇಳಕ್ಕೆ ಬರುವವರೆಗೆ ಸೂಕ್ತವಾದ ವ್ಯವಸ್ಥೆ ಇಲ್ಲದೇ ಇರುವುದು ಕಂಡು ಬಂದಿದೆ. ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗುವ ವಾಹನಗಳನ್ನ ಇಳಿಸಲು ಸೂಕ್ತವಾದ ವ್ಯವಸ್ಥೆ ಮಾಡದೇ ಇರುವುದು ಇಂತಹ ಅವಘಡಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ, ಶವವನ್ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.