ಕೆಪಿಟಿಸಿಎಲ್ ನೌಕರರ ಸಂಘದ ರಾಜ್ಯಾಧ್ಯಕ್ಷರ ತುಂಡು ಪಾರ್ಟಿ: ಅಧಿಕಾರವಿದ್ದವರಿಗೆ ಕಾನೂನು ಇಲ್ವಾ..?
ಮೈಸೂರು: ಕೊರೋನಾ ನೀತಿ ನಿಯಮ ಉಲ್ಲಂಘಿಸಿ ಬರ್ತ್ ಡೇ ಪಾರ್ಟಿಯನ್ನ ಮೈಸೂರು ಸುಖಧರೆ ರೆಸ್ಟೋರೆಂಟ್ ಆವರಣದಲ್ಲಿ ಕೆಪಿಟಿಸಿಎಲ್ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಮಕೃಷ್ಣಯ್ಯ ಆಚರಿಸಿಕೊಂಡಿದ್ದು, ಅಧಿಕಾರವಿದ್ದವರಿಗೆ ಕಾನೂನು ಇಲ್ಲವೇ ಎನ್ನುವ ಸಂಶಯ ಮೂಡಿದೆ
ನೂರೈವತ್ತಕ್ಕೂ ಹೆಚ್ಚು ಜನ ಸೇರಿ ಮಾಂಸದೂಟ ಮಾಡಿ, ಕೇಕ್ ಕತ್ತರಿಸಿ ಬರ್ತಡೇ ಆಚರಿಸಿಕೊಂಡರೂ, ಹೇಳೋರಿಲ್ಲ ಕೇಳೋರಿಲ್ಲ. ಸ್ವತಃ ರಾಜ್ಯಾಧ್ಯಕ್ಷರೇ ಬರ್ತ್ ಡೇ ಪಾರ್ಟಿಯಲ್ಲಿದ್ದಿದ್ದರಿಂದ ಮೈಸೂರು ಚಾಮರಾಜನಗರ ವಿಭಾಗದ ಕೆಪಿಟಿಸಿಎಲ್ ಇಂಜಿನಿಯರ್ ಗಳು ಸಿಬ್ಬಂಧಿಗಳು ಕೂಡಾ ಮನಸೋಇಚ್ಚೇ ಭಾಗವಹಿಸಿದ್ದರು.
ಮಾಸ್ಕ್ ಇಲ್ಲಾ, ಸಾಮಾಜಿಕ ಅಂತರವಂತೂ ಇರಲೇಯಿಲ್ಲ. ರಸ್ತೆ ತುಂಬೆಲ್ಲಾ ಇಂಜೀನಿಯರಗಳ ಕಾರುಗಳದ್ದೇ ದರ್ಭಾರು ಹೆಚ್ಚಾಗಿತ್ತು. ಅಧಿಕಾರದಲ್ಲಿದ್ದವರು ಏನೂ ಮಾಡಿದರೂ ನಡೆಯತ್ತೆ ಅನ್ನೋದಕ್ಕೆ ಇದೂ ಕೂಡಾ ಹೊಸ ಸೇರ್ಪಡೆ.