Posts Slider

Karnataka Voice

Latest Kannada News

ಧಾರವಾಡ: ಕೋಟಕ್ ಲೈಫ್ ಇನ್ಸೂರೆನ್ಸ್ ಕಂಪನಿಗೆ ದಂಡ ವಿಧಿಸಿ ಪರಿಹಾರ ನೀಡಲು ಆದೇಶ….

Spread the love

ಕೋಟಕ್ ಲೈಫ್ ಇನ್ಶೂರೆನ್ಸ್ (Kotak Life Insurance) ಕಂಪನಿಗೆ ದಂಡ ವಿಧಿಸಿ ಮತ್ತು ಪರಿಹಾರಕ್ಕೆ ಆದೇಶ

ಧಾರವಾಡ: ಧಾರವಾಡದ ನಿವಾಸಿ ದೀಪ್ತಿ ನವಿಲೇ ಅವರ ತಂದೆಯವರು ಜೀವಿತಾವಧಿಯಲ್ಲಿದ್ದಾಗ ಎದುರುದಾರರಿಂದ ಪಾಲಿಸಿಯನ್ನು ಪಡೆದಿದ್ದರು ಅದಕ್ಕೆ ಅವರು ಪ್ರತಿ ವರ್ಷ ರೂ:2,15,251 ವಿಮಾ ಕಂತನ್ನು ತುಂಬುತ್ತಿದ್ದರು. ಈ ರೀತಿಯಾಗಿ ಐದು ವರ್ಷ ತುಂಬಿದ ನಂತರ ದೂರುದಾರರ ತಂದೆಯವರು ಮರಣ ಹೊಂದಿದ ಕಾರಣ ದೂರುದಾರರಿಗೆ ಆರ್ಥಿಕ ತೊಂದರೆಯಿಂದ ವಿಮಾ ಕಂತು ಹಣ ತುಂಬಲು ಸಾಧ್ಯವಾಗಿರುವುದಿಲ್ಲ. ಈ ಕಾರಣದಿಂದ ದೂರುದಾರರು ಎದುರುದಾರರ ಕಂಪನಿಗೆ ಹೋಗಿ ವಿಮಾ ಪಾಲಿಸಿಯನ್ನು ನಿಲ್ಲಿಸಲು ಕೇಳಿ ತಮ್ಮ ತಂದೆಯು ತುಂಬಿದ ಒಟ್ಟು ಹಣ ರೂ:10,85,742 ಮರಳಿಸುವಂತೆ ಕೋರಿರುತ್ತಾರೆ. ಆದರೆ ಎದುರುದಾರರು ಅಷ್ಟು ಹಣವನ್ನು ಕೊಡಲು ಸಾಧ್ಯವಿಲ್ಲ ಕಾರಣ ಈ ಐದು ವರ್ಷಗಳಲ್ಲಿ ಅವರು Statinary charge, GST and CGST, Agent commission, office maintenance etc., ಸಲುವಾಗಿ ಬಳಕೆಮಾಡಿದ್ದರಿಂದ ಪೂರ್ತಿ ಹಣಕೊಡಲು ನಿರಾಕರಿಸಿದ್ದರು. ಎದುರುದಾರರ ಈ ನಡವಳಿಕೆಯಿಂದ ತನಗೆ ಮಾನಸಿಕ ಹಾನಿ ಹಾಗೂ ಅನಾನೂಕೂಲತೆ ಆಗಿದೆ ಎಂದು ದೂರುದಾರರು ಎದುರುದಾರರ ಈ ಸೇವಾ ನ್ಯೂನೆತೆಗೆ ಗ್ರಾಹಕರ ಸಂರಕ್ಷಣಾ ಕಾಯಿದೆಯಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಈ ದೂರನ್ನು ದಿನಾಂಕ 08.08.2023 ರಂದು ಆಯೋಗದ ಮುಂದೆ ಹಾಜರುಪಡಿಸಿದ್ದರು.


ಸದರಿ ದೂರಿನ ಬಗ್ಗೆ ಕುಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರ ತಂದೆಯವರು ಎದುರುದಾರರಿಂದ ಪ್ರತಿ ತಿಂಗಳು ರೂ.2,15,000 ಪಾವತಿಸಿ ವಿಮಾ ಹಣವನ್ನು ಒಟ್ಟು ಹತ್ತು ವರ್ಷ ತುಂಬುವ ಕರಾರನ್ನು ಮಾಡಿಕೊಂಡಿದ್ದರು. ಆದರೆ ಐದು ಕಂತುಗಳನ್ನು ತುಂಬಿದ ನಂತರ ಅವರ ತಂದೆಯವರು ಮರಣ ಹೊಂದಿದ್ದರು. ಮುಂದಿನ ಕಂತುಗಳನ್ನು ದೂರುದಾರರಿಗೆ ತುಂಬುಲು ಸಾಧ್ಯವಾಗದ ಕಾರಣ ತಮ್ಮ ತಂದೆಯವರು ಐದು ವರ್ಷ ತುಂಬಿದ ವಿಮಾ ಕಂತುಗಳನ್ನು ಮರಳಿಸುವಂತೆ ಎದುರುದಾರರಿಗೆ ಕೋರಿರುತ್ತಾರೆ. ಆದರೆ ಎದುರುದಾರರು ತಮ್ಮ ಕಂಪನಿಯ ನಿಯಮಾವಳಿಯ ಪ್ರಕಾರ ಕೇವಲ 50 ಹಣಕೊಡಲು ಬಾಧ್ಯಸ್ಥರಿರುವುದುದಾಖಲೆ ಮುಖಾಂತರಕಂಡುಬಂದಿರುತ್ತದೆ. ಆದರೂ ಆ ಹಣವನ್ನು ದೂರುದಾರರಿಗೆ ನೀಡದೆ ಸೇವಾ ನ್ಯೂನತೆ ಎಸಗಿರುವುದರಿಂದ ಎದುರುದಾರರು ಈ ಆದೇಶವಾದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ರೂ:7,50,000 ಮರಳಿ ಕೊಡಲು ನಿರ್ದೇಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚಕೊಡುವಂತೆ ಆಯೋಗ ಎದುರುದಾರರಾದ Kotak Life Insurance ಕಂಪನಿಗೆ ಆದೇಶಿಸಿದೆ.


Spread the love

Leave a Reply

Your email address will not be published. Required fields are marked *