MLA ಮಾಡಿದ ಪಕ್ಷವನ್ನ ತೊರೆದು ಕಾಂಗ್ರೆಸ್ ಧ್ವಜ ಹಿಡಿದ ಎನ್.ಎಚ್.ಕೋನರೆಡ್ಡಿ…!

ಬೆಳಗಾವಿ: ಹಲವು ದಿನಗಳಿಂದ ಹಬ್ಬಿದ ವದಂತಿಗೆ ಕೊನೆಗೂ ಮುಕ್ತಿ ದೊರೆತಿದ್ದು, ತಮ್ಮನ್ನ ಶಾಸಕರನ್ನಾಗಿ ಮಾಡಿದ್ದ ಜಾತ್ಯಾತೀತ ಜನತಾದಳವನ್ನ ತೊರೆದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಕಾಂಗ್ರೆಸ್ ಪಕ್ಷವನ್ನ ಅಧಿಕೃತವಾಗಿ ಸೇರ್ಪಡೆಗೊಂಡರು.

ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಚಿವರುಗಳಾದ ಜಿ.ಪರಮೇಶ್ವರ, ರಮೇಶಕುಮಾರ, ಎಚ್.ಕೆ.ಪಾಟೀಲ, ಸತೀಶ ಜಾರಕಿಹೊಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎನ್.ಎಚ್.ಕೋನರೆಡ್ಡಿಯವರ ಜೊತೆಗಿನ ಸಂಬಂಧಗಳ ಬಗ್ಗೆ ಪ್ರಮುಖರು ಮಾತನಾಡಿದರು. ನವಲಗುಂದ ಕ್ಷೇತ್ರದ ಮುಂದಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿಯವರ ಉಪಸ್ಥಿತಿಯಲ್ಲೇ ಸೇರ್ಪಡೆಗೊಂಡಿದ್ದು ವಿಶೇಷವಾಗಿತ್ತು.