ಏರ್ ಇಂಡಿಯಾ ವಿಮಾನ ಅವಘಡ : 191 ಪ್ರಯಾಣಿಕರನ್ನ ಹೊಂದಿದ್ದ ವಿಮಾನ: ವೀಡಿಯೋಯಿದೆ..
ಕೇರಳ: ದುಬೈನಿಂದ ಕ್ಯಾಲಿಕಟ್ ಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಕೋಜಿಕೋಡು ವಿಮಾನ ನಿಲ್ದಾಣದ ರನ್ ವೇ ದಲ್ಲಿ ಜಾರಿದ ಪರಿಣಾಮ ಅವಘಡ ಸಂಭವಿಸಿದೆ.
ಸುಮಾರು 191 ಪ್ರಯಾಣಿಕರನ್ನ ಹೊಂದಿದ್ದ ವಿಮಾನವೂ ಯಾವ ಕಾರಣಕ್ಕೆ ವಿಮಾನ ಜಾರಿದೆ ಎಂಬುದರ ಬಗ್ಗೆ ಮಾಹಿತಿ ಸಿಗಬೇಕಿದೆ. ವಿಮಾನ ಅಪಘಾತದಲ್ಲಿ ಪೈಲಟ್ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದ್ದು, ಹಲವರು ಗಾಯಗೊಂಡಿದ್ದಾರೆ.
ವಿಮಾನದಲ್ಲಿದ್ದವರ ನಿಜವಾದ ಸ್ಥಿತಿ ಏನಾಗಿದೆ ಎಂಬುದು ನಿಖರವಾಗಿ ಗೊತ್ತಾಗಿಲ್ಲವಾದರೂ, ಅಲ್ಲಿದ್ದ ಹಲವರನ್ನ ಆಸ್ಪತ್ರೆಗೆ ದಾಖಲು ಮಾಡಲು ಅಂಬ್ಯುಲೆನ್ಸ್ ಬಂದಿದ್ದು, ತೀವ್ರವಾಗಿ ಗಾಯಗೊಂಡಿರುವವರನ್ನ ರವಾನೆ ಮಾಡಲಾಗುತ್ತಿದೆ.
ವಿಮಾನದ ಮುಂದಿನ ಭಾಗ ಸಂಪೂರ್ಣ ಜಖಂಗೊಂಡಿದ್ದು, ಘಟನೆಯಲ್ಲಿ ಎಷ್ಟು ಜನರಿಗೆ ಯಾವ ಥರದ ಗಾಯಗಳಾಗಿವೆ ಎಂಬುದು ಗೊತ್ತಾಗಬೇಕಿದೆ.