ಮೃತನಿಗೆ ಚಿಕಿತ್ಸೆ ನೀಡಿದ ಸಿಬ್ಬಂದಿಗೆ ಕೊರೋನಾ ಭೀತಿ
1 min readಕೋಲಾರ: ಜಿಲ್ಲೆಯ ಮಾಲೂರಿನಲ್ಲಿ ಮಹಾರಾಷ್ಟ್ರ ಮೂಲದ ವೃದ್ದ ಸಾವಿಗೀಡಾಗಿದ್ದು, ಮೃತ ವೃದ್ದನಿಗೆ ಚಿಕಿತ್ಸೆ ನೀಡಿದ್ದಕ್ಕೆ ಸಿಬ್ಬಂದಿಗೆ ಕೊರೊನಾ ಭೀತಿ ಎದುರಾಗಿದೆ.
ಸುಮಾರು 60 ರಿಂದ 62 ವಯಸ್ಸಿನ ಕಾರ್ಮಿಕ ತರಕಾರಿ ಮಾರುಕಟ್ಟೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಚಿಕ್ಕಬಳ್ಳಾಪುರ ಮೂಲದ ತರಕಾರಿ ವಾಹನ ಚಾಲಕನ ಜೊತೆ ಮಹಾರಾಷ್ಟ್ರ ದಿಂದ ಕಳೆದ 15 ದಿನಗಳ ಹಿಂದೆ ಮೃತ ವ್ಯಕ್ತಿ ಬಂದಿದ್ದರು. ಮಹಾರಾಷ್ಟ್ರ ರಾಜ್ಯಕ್ಕೆ ತರಕಾರಿ ರಪ್ತು ಮಾಡುತ್ತಿದ್ದ ಚಾಲಕನೊಂದಿಗೆ ಆಗಮಿಸಿದ್ದರು. ಈಗಾಗಲೇ ಮಹಾರಾಷ್ಟ್ರ ಓಡಾಟ ಹಿನ್ನಲೆ ಚಾಲಕನಿಗೆ ಆಸ್ಪತ್ರೆಯಲ್ಲಿ ಕ್ವಾರೆಂಟೈನ್ ಮಾಡಲಾಗಿದೆ. ಮೃತ ವೃದ್ದನ ಗಂಟಲು ದ್ರವ ಮಾದರಿ ಟೆಸ್ಟ್ ಗೆ ರವಾನೆ ಮಾಡಲಾಗಿದೆ.