ಈಜಲು ಹೋದ ಯುವಕ ನೀರು ಪಾಲು

ಕೊಡಗು: ಈಜಲು ತೆರಳಿದ ಯುವಕ ನೀರುಪಾಲು ನೀರು ಪಾಲಾದ ಘಟನೆ ನಾಪೋಕ್ಲು ಬಳಿಯ ಚೇರಿಯಪರಂಬು ಬಳಿಯ ಕಲ್ಲುಮೊಟ್ಟೆಯಲ್ಲಿ ನಡೆದಿದೆ.
ಕಾವೇರಿ ನದಿಗೆ ಈಜಲು ತೆರಳಿದ್ದ ಪಾಲೂರಿನ ಯುವಕ ನಿತಿನ್ ನದಿಪಾಲಾಗಿದ್ದಾನೆ. ನಿತಿನ್, ರಮೇಶ್ ಮೊಣ್ಣಪ್ಪ-ಪುಷ್ಪ ದಂಪತಿ ಪುತ್ರನಾಗಿರುವ ಈತ, ಸಂಜೆ 6 ಗಂಟೆ ಸುಮಾರಿಗೆ ದುರ್ಘಟನೆಯಲ್ಲಿ ಸಾವಿಗೀಡಾಗಿದ್ದಾನೆ. ಈತನ ಶವಕ್ಕಾಗಿ ಸ್ಥಳೀಯರು ಮತ್ತು ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.