ಶಿವಲೀಲಾ ಕುಲಕರ್ಣಿ ಕೆಎಂಎಫ್ ನಾಮನಿರ್ದೇಶನ ರದ್ದು ಮಾಡಲು ಹೈಕೋರ್ಟ್ ಮೊರೆ ಹೋದ ಶಂಕರ ಮುಗದ…!!!

ಧಾರವಾಡ: ಕೆಎಂಎಫ್ ಅಧ್ಯಕ್ಷ ಗಾದಿಗೆ ನಡೆದಿರುವ ಜಿದ್ದಾಜಿದ್ದಿನ ಪೈಪೋಟಿಗೆ ಹೊಸದೊಂದು ಟ್ವಿಸ್ಟ್ ನಿರ್ಮಾಣವಾಗಿದ್ದು, ಹಾಲಿ ಶಾಸಕ ವಿನಯ ಕುಲಕರ್ಣಿಯವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನ ನಿರ್ದೇಶಕರನ್ನಾಗಿ ನೇಮಕ ಮಾಡಿರುವ ಕ್ರಮವನ್ನ ಹೈಕೋರ್ಟ್‌ನಲ್ಲಿ ಶಂಕರ ಮುಗದ ಪ್ರಶ್ನಿಸಿದ್ದಲ್ಲದೇ, ನೇಮಕವನ್ನ ರದ್ದು ಮಾಡುವಂತೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಯಾವುದೇ ಕ್ಷಣದಲ್ಲಿ ಈ ಬಗ್ಗೆ ನ್ಯಾಯಾಲಯದ ಬೋರ್ಡ್‌ನಲ್ಲಿ ಅರ್ಜಿ ಬರಲಿದ್ದು, ನಾಳೆ ಕೆಎಂಎಫ್ ಅಧ್ಯಕ್ಷ ಗಾದಿಗಾಗಿ ನಡೆಯುತ್ತಿರುವ ಚುನಾವಣೆ ಮತ್ತಷ್ಟು ಕೌತುಕ ಮೂಡಿಸಿದೆ.
ಹಾಲಿ ಅಧ್ಯಕ್ಷ ಶಂಕರ ಮುಗದ ಐತಿಹಾಸಿಕ ಗೆಲುವು ಸಾಧಿಸಿ, ಮತ್ತೆ ಅಧ್ಯಕ್ಷರಾಗುವ ಉಮೇದಿಯಲ್ಲಿದ್ದಾರೆ. ಇದೇ ಸಮಯದಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ ಅವರ ಆಪ್ತ ಶಂಕರ ಮುಗದ ಅವರಿಗೆ ಅಧ್ಯಕ್ಷ ಗಾದಿ ಸಿಗದಂತೆ ಸರ್ವ ಪ್ರಯತ್ನವನ್ನ ವಿರೋಧ ಪಕ್ಷದವರು ನಡೆಸಿದ್ದಾರೆ.
ಈಗಾಗಲೇ ಶಂಕರ ಮುಗದ ಅಧ್ಯಕ್ಷರಾಗಲು ಮುಂದಿದ್ದು, ಶಿವಲೀಲಾ ಕುಲಕರ್ಣಿಯವರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಮಾಡುವ ಲಕ್ಷಣಗಳು ಕಂಡು ಬಂದಿವೆ.
ಈ ನಡುವೆ ಹೈಕೋರ್ಟ್ ನೀಡುವ ಆದೇಶ ಚುನಾವಣೆಯ ಮೊದಲೇ ಹೊರಬಿದ್ದರೇ, ಕೆಎಂಎಫ್ ಅಧ್ಯಕ್ಷಗಿರಿಯ ಫಲಿತಾಂಶ ಇತಿಹಾಸವನ್ನ ಸೃಷ್ಟಿಸಲಿದೆ.