ಕೆಎಲ್ಇ ಸಂಸ್ಥೆಯ ದುರಂಹಕಾರ: ಮಠದ ಆಸ್ತಿ ಮಠಕ್ಕೆ ಬರತ್ತೆ…

ಹುಬ್ಬಳ್ಳಿ: ಸುಪ್ರಿಂಕೋರ್ಟಿನ ಆದೇಶವನ್ನೇ ತಿರುಚಿರೋ ಪ್ರಕರಣ ಗೊತ್ತಿದ್ದರೂ ಮಠದ ಆಸ್ತಿಯನ್ನ ಹೊಡೆಯಲು ನಿಂತಿರುವುದು ದುರಂಹಕಾರ ಮತ್ತೂ ದುರ್ತತನದ ಪರಮಾವಧಿ ಎಂದು ಮೂರುಸಾವಿರ ಮಠದ ಉತ್ತರಾಧಿಕಾರಿ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ಸ್ವಾಮೀಜಿ ಮತ್ತು ಬಾಲಕ ಮಾತನಾಡಿರೋ ವೀಡಿಯೋ
ಹುಬ್ಬಳ್ಳಿಯಲ್ಲಿ ನಮ್ಮ ಮಠ ನಮ್ಮ ಆಸ್ತಿ, ಮಠವನ್ನ ಉಳಿಸೋಣ ಎಂಬ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು, ಹಲವು ಕಾನೂನು ತೊಡಕುಗಳು ಇದ್ದರೂ ಕಾಮಗಾರಿಯನ್ನ ಆರಂಭಿಸಿದ್ದಾರೆ ಎಂದರೇ, ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದರು.
ಮಠದ ಆಸ್ತಿಯನ್ನ ಯಾವುದೇ ಕಾರಣಕ್ಕೂ ಮಠದಿಂದ ಹೋಗಲು ಬಿಡುವುದಿಲ್ಲ. ನಮ್ಮ ಆಸ್ತಿಯನ್ನ ನಾವೂ ಉಳಿಸಿಕೊಂಡೇ ತೀರುತ್ತೇವೆ ಎಂದರು.
ಇದೇ ಸಮಯದಲ್ಲಿ ಎಂಟು ವರ್ಷದ ಬಾಲಕನೋರ್ವ ಮಾತನಾಡಿ, ಮಠವನ್ನ ಉಳಿಸಿ ಬೆಳೆಸಿ ಎಂದು ಹಿರಿಯರಲ್ಲಿ ಮನವಿ ಮಾಡಿಕೊಂಡ ಘಟನೆ ನಡೆಯಿತು.