ಅವರಲ್ಲಿಗೆ ಹೋಗಿದ್ದು ಗೆಳೆಯನನ್ನ ಖುಷಿ ಪಡಿಸೋಕೆ: ಒಂದು ವರ್ಷದ ಹಿಂದೆ ಎಂಗೇಜ್ ಆಗಿರೋ ಜೋಡಿಗಳ ಜೊತೆಗೆ..!
1 min readಹುಬ್ಬಳ್ಳಿ: ದೂರದ ಪೂನಾದಿಂದ ಬಂದಿದ್ದ ಗೆಳೆಯನೊಂದಿಗೆ ತನ್ನ ಮಡದಿಯಾಗುವ ಹುಡುಗಿ ಹಾಗೂ ಗೆಳೆಯರನ್ನ ಕರೆದುಕೊಂಡು ಹೋಗಿದ್ದ ಯುವಕನೂ ಇನ್ನಿಲ್ಲವಾಗಿದ್ದು, ಆತನ ಶವಕ್ಕಾಗಿ ಹುಡುಕಾಟ ನಡೆದಿದೆ.
ಇಡೀ ಘಟನೆಯ ಬಗ್ಗೆ ಕರ್ನಾಟಕವಾಯ್ಸ್ ಜೊತೆ ಬದುಕುಳಿದ ಸಲ್ಮಾನ ಪಿಳ್ಳೆ ಮಾತನಾಡಿದ್ದಾನೆ. ಆತನು ಹೇಳಿದ್ದು ಇಷ್ಟಿದೇ ನೋಡಿ..
ನಮ್ಮ ಗಜ್ಜು, ಅದೇ ಸರ್ ಗಜಾನನ ಊರಿಂದ ಬಂದಿದ್ದಾ ಅಲ್ರೀ. ಅದಕ್ಕ್ ಪೋಟೊ ತೆಗ್ಯಾಕ್ ಅಂತಾ ಎಲ್ರೂ ಕೂಡಿ ಹೋದ್ವಿ. ಅಲ್ಲಿ ಕಾರ್ ನಿಲ್ಲಸಿ, ಕ್ಯಾಮರಾ ತೆಗೆಯೋಣ ಅಂತಾ ಗಜ್ಜು ಮುಂದ್ ಹೋದಾ ನೋಡ್ರೀ, ಆಗ ಜೇನು ಬಂದ್ ಬಿಟ್ವುರ್ರೀ..
ನಾನ್ ಏನ್ ಮಾಡಬೇಕಂತ ಗೊತ್ತಾಗ್ದ ಓಡಿ ಹೋದ್ಯಾರಿ. ನತಾಶಾ, ಒಳಗ್ ಜೋತು ಬಿದ್ದಿದ್ಲೀ. ಜೋಶಿಗೀ, ಸನ್ನಿಗೇ ಮತ್ತ್ ಗಜ್ಜು ನೀರಾಗ ಬಿದ್ರ್ ಜೇನ್ ಕಡಿದುಲ್ಲಂತ ಜಿಗಿದ ಬಿಟ್ರೀ. ಸುಮ್ಮನ್ ಮಲಕೋಂಡದ್ರೂ ನಡೀತಿತ್ರಿ ಎನ್ನುತ್ತಲೇ ಕಣ್ಣೀರಾದ ಸಲ್ಮಾನ.
ಕಳೆದ ವರ್ಷವೇ ನತಾಶಾ ಜೊತೆ ಜೋಶಿಯ ಎಂಗೇಜ್ ಮೆಂಟ್ ಆಗಿದೆ. ಇನ್ನೂ ಮದುವೆ ಫಿಕ್ಸ್ ಆಗಿಲ್ಲ ಎಂಬುದನ್ನ ಕೂಡಾ ವಿವರವಾಗಿ ತಿಳಿಸಿದ. ಈಗಿದ್ದವರೂ ಈಗಿಲ್ಲ ಎನ್ನುವ ಸ್ಥಿತಿಯಲ್ಲಿರುವ ಬದುಕುಳಿದ ನತಾಶಾ ಹಾಗೂ ಸಲ್ಮಾನ್ ಮೂರು ಗೆಳೆಯರನ್ನ ಕಳೆದುಕೊಂಡು ಮಾತೇ ಬಾರದವರಾಗಿದ್ದಾರೆ. ನತಾಶಾಳ ಜೀವನಪೂರ್ತಿ ಹೆಜ್ಜೆಯಿಡಬೇಕಾಗಿದ್ದ ಜೋಶಿಗಾಗಿ ಹುಡುಕಾಟ ನಿರಂತರವಾಗಿ ನಡೆಯುತ್ತಿದೆ.