ಕಿರೇಸೂರಲ್ಲಿ ಜನಜಾಗೃತಿಗೆ ಮುಂದಾದ ಗ್ರಾಮ ಪಂಚಾಯತಿ…!
1 min readಹುಬ್ಬಳ್ಳಿ: ತಾಲೂಕಿನ ಕಿರೇಸೂರ ಗ್ರಾಮದಲ್ಲಿ ಸಾರ್ವಜನಿಕರಿಗೆ ಕೊರೋನಾ ಜಾಗೃತಿ ಮೂಡಿಸಲು ಗ್ರಾಮ ಪಂಚಾಯತಿ ಮುಂದಾಗಿದ್ದು, ಗ್ರಾಮದ ಪ್ರತಿಯೊಂದು ಪ್ರದೇಶಕ್ಕೂ ತೆರಳಿ, ಮಾಹಿತಿಯನ್ನ ನೀಡುತ್ತಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಕೆ. ಪಾಟೀಲ್ ನೇತೃತ್ವದಲ್ಲಿ ಗ್ರಾಮದ ಓಣಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನೀಲಪ್ಪ ಗಾಳಪ್ಪನವರ, ಸದಸ್ಯರಾದ ಹನುಮಂತಗೌಡ ರಾಯನಗೌಡ್ರ, ಪ್ರಭು ಬುಳಗಣ್ಣವರ, ಪ್ರಭು ತಿರ್ಲಾಪುರ, ಶಿಲ್ಪಾ ಗಣಿ, ಲಕ್ಷ್ಮಿ ಕಲ್ಲಕನವರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಕಬ್ಬೆರಿ, ಆರೋಗ್ಯ ಇಲಾಖೆಯ ರಾಜೇಶ್ವರಿ ಕುಸಲಾಪೂರ ಸೇರಿದಂತೆ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಯಾರಿಗಾದರೂ ಕೆಮ್ಮು, ಜ್ವರ, ಗಂಟಲು ಕೆರೆತ ಬಂದರೇ ತಕ್ಷಣವೇ ಸಂಬಂಧಿಸಿದವರಿಗೆ ಮಾಹಿತಿಯನ್ನ ನೀಡಬೇಕು. ನಿಮ್ಮ ಆರೋಗ್ಯ ಕಾಪಾಡುವ ಜೊತೆಗೆ ನಿಮ್ಮೂರಿನ ಆರೋಗ್ಯವನ್ನ ಕಾಪಾಡಬೇಕೆಂದು ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಕೆ.ಪಾಟೀಲ ಗ್ರಾಮಸ್ಥರಿಗೆ ಹೇಳಿದರು.