Posts Slider

Karnataka Voice

Latest Kannada News

ಹುಬ್ಬಳ್ಳಿಯ ಕಿಮ್ಸ್ ಸಿಬ್ಬಂದಿ ಆತ್ಮಹತ್ಯೆ

1 min read
Spread the love

ಹುಬ್ಬಳ್ಳಿ: ಕಳೆದ ಇಪ್ಪತ್ತು ವರ್ಷದಿಂದ ಕಿಮ್ಸ್ ನ ಶವಾಗಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ಮನೆಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋನಿಯಾಗಾಂಧಿನಗರದಲ್ಲಿ ಸಂಭವಿಸಿದೆ.

ಲಕ್ಷ್ಮಣ ದೊಡ್ಡಮನಿ ಎಂಬಾತನೇ ಆತ್ಮಹತ್ಯೆಗೆ ಶರಣಾಗಿದ್ದು, ಮನೆಯವರೆಲ್ಲರೂ ಹೊಸ ವರ್ಷದ ಖುಷಿಯನ್ನ ಹಂಚಿಕೊಂಡು ಮಲಗಿದ್ದಾರೆ. ಆಗಲೂ ಎಲ್ಲರೊಂದಿಗೆ ಬೆರೆತು ಊಟ ಮಾಡಿದ್ದ ಲಕ್ಷ್ಮಣ, ಬೆಳಗಾಗುವುದರೊಳಗೆ ನೇಣಿಯ ಕುಣಿಕೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

53 ವಯಸ್ಸಿನ ಲಕ್ಷ್ಮಣ ಕಳೆದ 20 ವರ್ಷದಿಂದ ನೂರಾರೂ ಶವಗಳನ್ನ ಹೊತ್ತು ಸಾಗಿಸಿದ್ದ. ಇಂದು ಆತನ ಶವದ ಮರಣೋತ್ತರ ಪರೀಕ್ಷೆ ಅಲ್ಲಿಯೇ ನಡೆಯುವಂತಾಗಿದ್ದು, ದುರ್ದೈವದ ಸಂಗತಿಯಾಗಿದೆ.

ಶವಗಾರದಲ್ಲಿ ಕೆಲಸ ಮಾಡುತ್ತಿದ್ದರೂ, ಎಲ್ಲರೊಂದಿಗೆ ಬೆರೆಯುತ್ತಿದ್ದ ಲಕ್ಷ್ಮಣ ಸಾವು, ಇನ್ನುಳಿದವರಲ್ಲಿ ನೋವನ್ನುಂಟು ಮಾಡಿದೆ. ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ಬೆಂಡಿಗೇರಿ ಠಾಣೆಯ ಪೊಲೀಸರು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed