ಕಿಮ್ಸ್ ವೈಧ್ಯ ವಿದ್ಯಾರ್ಥಿಗಳ ಕೊಠಡಿ ಮೇಲೆ ಕಲ್ಲು ತೂರಾಟ…!
1 min readಹುಬ್ಬಳ್ಳಿ: ಕಿಮ್ಸನ ವಿದ್ಯಾರ್ಥಿಗಳ ಕೊಠಡಿಯಲ್ಲಿ ಅನಾಮಧೇಯರು ಕಲ್ಲು ತೂರಾಟ ನಡೆಸಿದ್ದು, ವೈಧ್ಯ ವಿದ್ಯಾರ್ಥಿಯೋರ್ವನಿಗೆ ತೀವ್ರ ಥರದ ಗಾಯಗಳಾದ ಘಟನೆ ಬೆಳಕಿಗೆ ಬಂದಿದೆ.
ಕಿಮ್ಸನ ವೈಧ್ಯಕೀಯ ವಿದ್ಯಾರ್ಥಿಗಳಿಗೆ ನೀಡಿರುವ ಧರ್ಮಶಾಲಾ ಕಟ್ಟಡದಲ್ಲಿ ಘಟನೆ ನಡೆದಿದ್ದು, ಇಟ್ಟಿಗೆ ತೂರಿದ ಪರಿಣಾಮ ಕೋಣೆಯ ಗಾಜು ಪುಡಿ ಪುಡಿಯಾಗಿ ಅಮನ್ ಎಂಬ ವಿದ್ಯಾರ್ಥಿಗೆ ಮೊಣಗಾಲಿಗೆ ಇಟ್ಟಿಗೆ ಬಡಿದು ಗಾಯಗಳಾಗಿ, ರಕ್ತಸ್ರಾವವಾಗಿದೆ.
126 ವಿದ್ಯಾರ್ಥಿಗಳಿಗೆ ಕಿಮ್ಸ ಆಡಳಿತ ಮಂಡಳಿ ಧರ್ಮಶಾಲಾ ಕಟ್ಟಡವನ್ನ ವಸತಿಗಾಗಿ ನೀಡಿದೆ. ಎಂದಿನಂತೆ ಊಟ ಮಾಡಿ ಕಿಡಕಿಯ ಪಕ್ಕದಲ್ಲಿ ವಿದ್ಯಾರ್ಥಿ ಮಲಗಿದ್ದ. ಕೆಲವೊತ್ತಿನ ನಂತರ ಇಟ್ಟಿಗೆಯೊಂದು ಗಾಜುನ್ನ ಒಡೆದು, ಅಮನ್ ಎಂಬಾತನಿಗೆ ಬಡಿದಿದೆ.
ಘಟನೆಯಿಂದ ಗಾಬರಿಯಾದ ವಿದ್ಯಾರ್ಥಿಗಳು ತಕ್ಷಣವೇ ಚೀರಿಕೊಂಡಿದ್ದರಿಂದ ಭದ್ರತಾ ಸಿಬ್ಬಂದಿಗಳಾದ ಎಂ.ಎಂ.ಕಿಲ್ಲೆದಾರ, ಸುಧೀರ ಶಿಂಧೆ, ವೈ.ಎಂ. ಕಾಳೆಣ್ಣನವರ, ಸಿ.ಸಿ. ಬಳಿಗೇರ ಆಗಮಿಸಿ, ಪರಿಸ್ಥಿತಿಯನ್ನ ತಿಳಿಸಿಕೊಳಿಸಿದ್ದಾರೆ.
ಇಟ್ಟಿಗೆ ಗಾಜನ್ನ ಒಡೆದಿದ್ದರಿಂದ ಕೋಣೆಯ ತುಂಬ ಗಾಜು ಪುಡಿ ಪುಡಿಯಾಗಿ ಬಿದ್ದಿತ್ತು. ಇನ್ನುಳಿದ ವಿದ್ಯಾರ್ಥಿಗಳು ಗಾಯಗೊಂಡ ವಿದ್ಯಾರ್ಥಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಘಟನೆಯ ಬಗ್ಗೆ ಕಿಮ್ಸ್ ಆಡಳಿತ ಮಂಡಳಿ ಏನೂ ಕ್ರಮವನ್ನ ಜರುಗಿಸುತ್ತದೆ ಎಂಬುದು ಗೊತ್ತಾಗಬೇಕಿದೆ.