ಸೊಸೆಗೆ ಬಂದ ದೌರ್ಭಾಗ್ಯ… ಕಿಮ್ಸನಲ್ಲಿ ‘ಆಕೆ’ ಹೇಗಿದ್ದಾರೆ..!
1 min readಹುಬ್ಬಳ್ಳಿ: ಬೇಡವಾದ ಸೊಸೆಯನ್ನು ಮನೆಯ ಮಹಡಿಯ ಮೇಲೆ ಹೋಗುವಂತೆ ಮಾಡಿ, ಮೇಲೆ ಹೋದ ನಂತರ ಕೆಳಗಡೆ ದೂಡಿ ಕೈಕಾಲು ಮುರಿದ ಘಟನೆ ಹಾವೇರಿ ಜಿಲ್ಲೆಯ ಅಕ್ಕಿಆಲೂರಿನ ಬಾಳಂಬಿಡ ಗ್ರಾಮದಲ್ಲಿ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನ ಕಿಮ್ಸಗೆ ದಾಖಲು ಮಾಡಲಾಗಿದೆ.
ಹಾವೇರಿ ಜಿಲ್ಲೆಯ ಅಕ್ಕಿ ಆಲೂರು ಪಟ್ಟಣದ ಶೃತಿ ಎಂಬ ಮಹಿಳೆಯೇ ತೀವ್ರವಾಗಿ ಗಾಯಗೊಂಡಿದ್ದು, ಬಾಳಂಬಿಡ ಗ್ರಾಮದ ಮುರಳಿ ಎಂಬ ವ್ಯಕ್ತಿಗೆ ಕಳೆದ ಆರು ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ವರನ ಮನೆಯವರ ಕಿರಿಕಿರಿ ನಿರಂತವಾಗಿ ನಡೆಯುತ್ತಿತ್ತಾದರೂ, ಹಿರಿಯರ ಮಾತುಕತೆಯ ಮೂಲಕ ಜಗಳವನ್ನ ಬಗೆಹರಿಸಲಾಗಿತ್ತು.
ಇಷ್ಟೇಲ್ಲ ನಡೆದರೂ, ಗಂಡನ ಮನೆಯವರ ಕಿರುಕುಳ ಮುಂದುವರೆದಿತ್ತು. ಸೊಸೆಯ ಮಹಡಿಯ ಮೇಲೆ ಶೇಂಗಾ ತರಲು ಕಳಿಸಿ, ಹಿಂದಿನಿಂದ ಗಂಡನ ಮನೆಯವರು ನೂಕಿದ್ದಾರೆಂದು ಗಾಯಾಳು, ಶೃತಿ ಆರೋಪ ಮಾಡಿದ್ದಾರೆ.
ಮಹಡಿಯ ಮೇಲಿಂದ ಬಿದ್ದ ಪರಿಣಾಮ ಶೃತಿ ಕೈ ಹಾಗೂ ಕಾಲು ಮುರಿದಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.