Posts Slider

Karnataka Voice

Latest Kannada News

ಬಡವರ ಬಂಧುವಾಗಿದ್ದ “ನಿಂಗಪ್ಪ ಹೆಬಸೂರ” ಹುಬ್ಬಳ್ಳಿ ಕಿಮ್ಸನಿಂದ ನಿವೃತ್ತಿ…

1 min read
Spread the love

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತಿಷ್ಠಿತ ಕಿಮ್ಸ ಆಸ್ಪತ್ರೆಯಲ್ಲಿ ಸುಮಾರು 41 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ನಿಂಗಪ್ಪ ಹೆಬಸೂರ ಅವರು ಸೇವಾ ನಿವೃತ್ತಿಯನ್ನ ಹೊಂದಿದರು.

ಮೂಲತಃ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ನಿಂಗಪ್ಪ ಹೆಬಸೂರ ಅವರು, ಕಿಮ್ಸನಲ್ಲಿ ಸುಮಾರು 41 ವರ್ಷ ಸೇವೆಯನ್ನ ಸಲ್ಲಿಸಿದ್ದರು. ಅವರ ಸೇವಾ ನಿವೃತ್ತಿಯ ದಿನದಂದು ಸ್ವತಃ ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರದಾನಿ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದು, ಸತ್ಕರಿಸಿದರು.

ನಿಂಗಪ್ಪ ಹೆಬಸೂರು ಅವರು ಕಿಮ್ಸನಲ್ಲಿ ತಮ್ಮ ಸೇವೆಯನ್ನ ಸಲ್ಲಿಸುತ್ತಲೇ ಸಾವಿರಾರೂ ಜನರಿಗೆ ಸಹಾಯ ಮಾಡುತ್ತಿದ್ದರು. ಗ್ರಾಮೀಣ ಪ್ರದೇಶದಿಂದ ಬಂದವರ ಪಾಲಿನ ಬಂಧುವಾಗಿದ್ದರು.

ಯಾವುದೇ ರೋಗದಿಂದ ನರಳುತ್ತಿದ್ದರೂ, ಅವರಿಗೆ ಸಂಬಂಧಿಸಿದ ವೈಧ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದರು. ಅಷ್ಟೇ ಅಲ್ಲ, ಸಾವಿರಾರೂ ಸರಕಾರಿ ನೌಕರರಿಗೂ ತಮ್ಮಿಂದಾದ ಸಹಾಯವನ್ನ ಮಾಡುತ್ತಲೇ ಬಂದಿದ್ದರು.

ಬಹುತೇಕ ಕಿಮ್ಸನಲ್ಲಿ 41 ವರ್ಷ ಸೇವೆ ಸಲ್ಲಿಸಿರುವ ನಿಂಗಪ್ಪ ಹೆಬಸೂರ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ. ಅವರ ಕುಟುಂಬದೊಂದಿಗೆ ಮತ್ತಷ್ಟು ಸಂತಸದಿಂದ ಸಾಗಲಿ ಎಂದು ಎಲ್ಲರೂ ಹಾರೈಸೋಣ.


Spread the love

Leave a Reply

Your email address will not be published. Required fields are marked *