ಹುಬ್ಬಳ್ಳಿ ಕೋವಿಡ್ ಸೆಂಟರ್ನಲ್ಲಿ ವೈದ್ಯರ ಮೊಬೈಲ್ ಕಳ್ಳತನ…!

ಹುಬ್ಬಳ್ಳಿ: ಕೊರೋನಾ ಮಹಾಮಾರಿಗೆ ಚಿಕಿತ್ಸೆ ಕೊಡುವ ವೈದ್ಯರ ಬೆಲೆಬಾಳುವ ಮೊಬೈಲ್ ನ್ನ ರೋಗಿಯ ಸಂಬಂಧಿಕನಂತೆ ಬಂದ ವ್ಯಕ್ತಿಯೋರ್ವ ಕದ್ದು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ತಮ್ಮ ಪ್ರಾಣವನ್ನ ಒತ್ತೆಯಿಟ್ಟು ನೂರಾರ ಜನರ ಪ್ರಾಣವನ್ನ ಉಳಿಸುತ್ತಿರುವ ವೈದ್ಯರಿಗೆ ಪ್ರತಿ ದಿನವೂ ಪೂಜಿಸುವ ಸಮಯವಿದು. ಆದರೆ, ಇಲ್ಲೊಬ್ಬ ಕಿರಾತಕ, ಐವತ್ತು ಸಾವಿರ ರೂಪಾಯಿ ಬೆಲೆಬಾಳುವ ಮೊಬೈಲನ್ನ ಎಗರಿಸಿ ಪರಾರಿಯಾಗಿದ್ದಾನೆ.
ವೀಡಿಯೋ ಇಲ್ಲಿದೆ ನೋಡಿ…
ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿದ್ಯಾನಗರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.