ಈ ತಂದೆಯೇ ಪರಿಸ್ಥಿತಿ ಯಾರಿಗೂ ಬರಬಾರ್ದು: ಕಿಮ್ಸ್ ಆಡಳಿತ ಹಿಂಗೇಕೆ

ಹುಬ್ಬಳ್ಳಿ: ಸ್ಟ್ರೆಕ್ಚರ್ ಇಲ್ಲದಕ್ಕೆ ಆಕ್ಸಿಜನ್ ಅಳವಡಿಸಿದ ಮಗವನ್ನ ಕೈಯಲ್ಲಿ ಹಿಡಿದುಕೊಂಡೇ ಸಾಗುವ ಪರಿಸ್ಥಿತಿಯನ್ನ ತಂದೆ ಅನುಭವಿಸಿದ್ದು, ಬಡವರ ನೋವನ್ನ ಕೇಳುವ ಕಿವಿಗಳೇ ಇಲ್ಲವಾಗಿವೆ.
ಆಕ್ಸಿಜನ್ ಟ್ಯಾಂಕ್ ಜೊತೆ ಮಗುವನ್ನ ತೆಗೆದುಕೊಂಡು ಹೋಗುವ ವಿಡಿಯೋ ವೈರಲ್ ಆಗಿದ್ದು, ತಂದೆ ತನ್ನ ಒಂದೂವರೆ ವರ್ಷದ ಮಗುವನ್ನ ಕೈಯಲ್ಲಿ ಹಿಡಿದುಕೊಂಡು ಮೆಟ್ಟಿಲಿಳಿದು ಹೋಗಿದ್ದಾನೆ. ಈ ವೀಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಕಿಮ್ಸ್ ನಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಆಡಳಿತ ಮಂಡಳಿ ಯಾವುದೇ ಕ್ರಮವನ್ನ ತೆಗೆದುಕೊಳ್ಳುತ್ತಿಲ್ಲ. ಬಡವರ ಜೀವನಾಡಿ ಎಂದೇ ಗುರುತಿಸಿಕೊಂಡಿದ್ದರೂ, ಬಡವರ ಪರವಾದ ವ್ಯವಸ್ಥೆ ಇರದೇ ಇರುವುದು ಸೋಜಿಗ ಮೂಡಿಸುತ್ತಿದೆ.