ಕಿಮ್ಸ್ ಆವರಣದಲ್ಲಿ ‘ಕೂತಲ್ಲೇ ಸಾವು’- ಸ್ಥಳಕ್ಕೆ ವಿದ್ಯಾನಗರ ಠಾಣೆ ಪೊಲೀಸರು…!

ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧರೋರ್ವರು ಕೂತಲ್ಲೇ ಸಾವಿಗೀಡಾದ ಘಟನೆ ಕೆಲ ಸಮಯದ ಹಿಂದೆ ಬೆಳಕಿಗೆ ಬಂದಿದೆ.

ಕಿಮ್ಸ್ ಆವರಣದಲ್ಲಿ ಹೆಸರು ಗೊತ್ತಿಲ್ಲದ ವೃದ್ಧರೋರ್ವರು ಕಿಮ್ಸ್ ಆವರಣದಲ್ಲಿನ ಬೆಂಚ್ ಮೇಲೆ ಕುಳಿತುಕೊಂಡು ಅಲ್ಲಿಯೇ ಬಾಗಿದ್ದಾರೆ. ಬಹುತೇಕರು ವೃದ್ಧರು ನಿದ್ದೆಯಲ್ಲಿದ್ದಾರೆಂದು ತಿಳಿದುಕೊಂಡು ಸುಮ್ಮನಾಗಿದ್ದಾರೆ.
ಕೆಲಕಾಲದ ನಂತರ ಕಿಮ್ಸಗೆ ಬಂದವರೊಬ್ಬರು, ವೃದ್ಧರನ್ನ ಮಾತನಾಡಿಸಲು ಹೋದಾಗ ಅವರು ತೀರಿಕೊಂಡಿರುವುದು ಗೊತ್ತಾಗಿದೆ. ತಕ್ಷಣವೇ ವಿದ್ಯಾನಗರ ಠಾಣೆಯ ಪೊಲೀಸರಿಗೆ ಮಾಹಿತಿಯನ್ನ ನೀಡಿದ್ದು, ಪೊಲೀಸರು ಪರಿಶೀಲನೆಯನ್ನ ನಡೆಸಿ ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.