Posts Slider

Karnataka Voice

Latest Kannada News

ಧಾರವಾಡ ಜಿಲ್ಲೆ: 7ದಿನದಲ್ಲಿ 425 ಆಕ್ಸಿಜನ್ ಬೆಡ್- ಕಿಮ್ಸನಲ್ಲಿ 300 ಹೆಚ್ಚುವರಿ ಬೆಡ್…!

1 min read
Spread the love

7 ದಿನದಲ್ಲಿ 425 ಆಕ್ಸಿಜನ್ ಬೆಡ್‌ ತಯಾರಿಗೆ ಜಿಲ್ಲಾಡಳಿತದಿಂದ ಸಿದ್ದತೆ

ಕಿಮ್ಸ್ ತಾಯಿ ಹಾಗೂ ಮಕ್ಕಳ ಆರೋಗ್ಯ ಕೇಂದ್ರದಲ್ಲಿ 300 ಹೆಚ್ಚುವರಿ ಆಕ್ಸಿಜನ್ ಬೆಡ್

ಹುಬ್ಬಳ್ಳಿ: ಜಿಲ್ಲೆಯಲ್ಲಿ 2000 ಆಕ್ಸಿಜನ್ ಬೆಡ್ ಹೊರತು ಪಡಿಸಿ ಧಾರವಾಡ ಹಾಗೂ ಕಿಮ್ಸ್ ಆವರಣದಲ್ಲಿನ ನೂತನವಾಗಿ ನಿರ್ಮಿಸಲಾಗುತ್ತಿರುವ ತಾಯಿ ಹಾಗೂ ಮಕ್ಕಳ ಆರೋಗ್ಯ ಕೇಂದ್ರದಲ್ಲಿ 425 ಹೆಚ್ಚುವರಿ ಆಕ್ಸಿಜನ್ ಬೆಡ್ ತಯಾರಿಗೆ ಜಿಲ್ಲಾಡಳಿತ ಸಿದ್ದತೆ ನಡೆಸಿದೆ.

ಈ ಕುರಿತು ನಿರ್ಮಾಣ ಹಂತದಲ್ಲಿರುವ ಕಿಮ್ಸ್ ತಾಯಿ ಹಾಗೂ ಮಕ್ಕಳ ಆರೋಗ್ಯ ಕೇಂದ್ರದಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಭೇಟಿ ನೀಡಿ ಪರಿಶೀಲನೆ ನೆಡೆಸಿದರು.‌

ಬರುವ ಮೇ 1 ರ ಒಳಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಬೆಡ್ ಸೌಕರ್ಯ ಕಲ್ಪಿಸಲು ಅವಕಾಶ ಮಾಡಿಕೊಡಬೇಕು ಎಂದು ಗುತ್ತಿಗೆದಾರರಿಗೆ ಸಚಿವರು ಸೂಚನೆ ನೀಡಿದರು‌.

20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ತಾಯಿ ಹಾಗೂ ಮಕ್ಕಳ ಆರೋಗ್ಯ ಕೇಂದ್ರದ ಬೆಸಮೆಂಟ್, ನೆಲ ಹಾಗೂ ಮೊದಲನೆ ಮಹಡಿಯಲ್ಲಿ ಈಗಾಗಲೇ ಕೋಳವೆ ಮೂಲಕ ಆಕ್ಸಿಜನ್ ಕೊಳೆವೆ ಸರಬಾರಜು ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಗ್ನಿಶಾಮಕ ತುರ್ತುವ್ಯವಸ್ಥೆ, ವಿದ್ಯುತ್, ನೀರು ಹಾಗೂ ಒಳಚಂರಡಿ ಸಂಪರ್ಕವನ್ನು ಕಲ್ಪಿಸಿ ತಾತ್ಕಾಲಿಕವಾಗಿ ಕೋವಿಡ್ ರೋಗಿಗಳಿಗಾಗಿ ಆಸ್ಪತ್ರೆಯನ್ನು ತೆರೆಯಲು ಉದ್ದೇಶಿಸಲಾಗಿದೆ.

ಭೇಟಿ ನಂತರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಷನಲ್‌ ಅರ್ಬನ್ ಹೆಲ್ತ್ ಸ್ಕೀನಡಿ 2017 ರಲ್ಲಿ‌ ಭಾರತ ಸರ್ಕಾರದ 20 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಕಿಮ್ಸ್ ಆವರಣ ಹಾಗೂ 26 ಕೋಟಿ ವೆಚ್ಚದಲ್ಲಿ ಧಾರವಾಡದಲ್ಲಿ ತಾಯಿ ಮತ್ತು ಮಗು ಆರೈಕೆ ಆಸ್ಪತ್ರೆ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿತ್ತು‌. ಆರೋಗ್ಯ ಇಲಾಖೆ ಇಂಜಿನಿಯರಿಂಗ್ ವಿಭಾಗದಿಂದ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ.

ಧಾರವಾಡ ಜಿಲ್ಲಾಡಳಿತ ಮುಂಜಾಗೃತ ಕ್ರಮಕೈಗೊಂಡು, ತಾತ್ಕಾಲಿಕವಾಗಿ ಕೋವಿಡ್ ಆಸ್ಪತ್ರೆಗಳನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಡಳಿತ ಕಾರ್ಯವೈಖರಿ ಮೆಚ್ಚುಗೆ ವ್ಯಕ್ತಪಡಿಸಿದರು‌.

ಕೇಂದ್ರದಿಂದ ರಾಜ್ಯಕ್ಕೆ 802 ಟನ್ ಮೆಡಿಕಲ್ ಆಕ್ಸಿಜನ್ ನಿಗದಿಪಡಿಸಿ ಪೂರೈಸಲು ಕ್ರಮಕೈಗೊಳ್ಳಲಾಗುತ್ತಿದೆ. ಇದರಲ್ಲಿ ಶೇ.90 ರಷ್ಟು ಆಕ್ಸಿಜನ್ ರಾಜ್ಯದಲ್ಲಿ ತಯಾರಾಗಿ ಇಲ್ಲಿಗೆ ಪೂರೈಕೆ ಆಗುತ್ತಿದೆ. ಉಳಿದ ಶೇ.10 ರಷ್ಟು ಆಕ್ಸಿಜನ್ ಸಹ ರಾಜ್ಯದಿಂದಲೇ ಪೂರೈಸಲು ರಾಜ್ಯ ಸರ್ಕಾರ ಕೋರಿದೆ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. 1.22 ಲಕ್ಷ ರೆಮಿಡಿಸಿವರ್ ವೈಲ್ ಗಳನ್ನು ಒದಗಿಸಲಾಗಿದೆ.‌

ಭಾರತ ಸರ್ಕಾರದಿಂದ 551 ಆಕ್ಸಿಜನ್ ಘಟಕ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.‌ ನೈಸರ್ಗಿಕ ಗಾಳಿಯಿಂದ ನೇರವಾಗಿ ಆಕ್ಸಿನಜ್ ಪ್ರತ್ಯೇಕಿಸಿ ರೋಗಿಗಳಿಗೆ ಸರಬರಾಜು ಮಾಡಲಾಗುವುದು. ಆಕ್ಸಿಜನ್ ಘಟಕ ನಿರ್ಮಾಣಕ್ಕೆ ಪಿ.ಎಂ.ಕೇರ್ ಮೂಲಕ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರಗಳು ಆಸಕ್ತಿ ವಹಿಸಿ ಶೀಘ್ರವಾಗಿ ಆಕ್ಸಿಜನ್ ಘಟಕಗಳನ್ನು ನಿರ್ಮಿಸಬೇಕು. ಖಾಸಗಿ ಕಂಪನಿ ಒಂದು ತಿಂಗಳ ಒಳಾಗಾಗಿ ಘಟಕ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಘಟಕ ನಿರ್ಮಾಣ ಮಾಡುವುದರಿಂದ ದಿನವೊಂದಕ್ಕೆ 60 ಜನರಿಗೆ ಆಕ್ಸಿಜನ್ ಒದಗಿಸಬಹುದು.

ಆಯ್ಯುಷಮಾನ್ ಭಾರತದಡಿ ಖಾಸಗಿ ಆಸ್ಪತ್ರೆಗಳು ಶೇ.50 ರಷ್ಟು ಹಾಸಿಗೆಗಳು ಮೀಸಲಿಡಲು ಸೂಚಿಸಲಾಗಿದೆ. ಈ ಕುರಿತು ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಲಾಗುವುದು. ತಜ್ಞರ ವರದಿಯ ಸಾದಕ ಬಾದಕಗಳನ್ನು ಆಧಾರಿಸಿ ಲಾಕ್ ಡೌನ್ ಕೈಗೊಳ್ಳಲು ರಾಜ್ಯ ಸರ್ಕಾರ ಎಲ್ಲಾ ಅಧಿಕಾರವನ್ನು ಕೇಂದ್ರ ಸರ್ಕಾರ ನೀಡಿದೆ.

ಕೋವಿಡ್ ವಾರ್ಯರ್ಸ್, ಫ್ರೆಂಟ್ ಲೈನ್ ಕೆಲಸಗಾರರು, 60 ವರ್ಷ ಮೇಲ್ಪಟ್ಟವರು ಹಾಗೂ 45 ವರ್ಷದ ಮೇಲ್ಪಟ್ಟ ವಯೋಸಹಜ ಕಾಯಿಲೆಯಿಂದ ಬಳಲುವವರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಕೋವಿಡ್ ಲಸಿಕೆ ನೀಡಿದೆ. ಉಳಿದ ಕೋವಿಡ್ ಲಸಿಕಾ ಅಭಿಯಾನವನ್ನು ರಾಜ್ಯ ಹಾಗೂ ಕೇಂದ್ರ‌ ಸರ್ಕಾರ ಸಹಭಾಗಿತ್ವದಲ್ಲಿ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಶಕ್ತವಿದ್ದವರು ಹಣ ಪಾವತಿಸಿ ಲಸಿಕೆಗೆ ಪಡೆದುಕೊಳ್ಳುವುದರಲ್ಲಿ ತಪ್ಪಿಲ್ಲ ಎಂದರು.

ದೇಶದ ಹಾಗೂ ರಾಜ್ಯದ ಜನರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಪರಿಸ್ಥಿತಿ ತುಂಬಾ ಗಂಭಿರವಾಗಿದೆ. ಜನರು ಪ್ರಾಣ ರಕ್ಷಣೆ ಒತ್ತು ಕೊಡಬೇಕು ಎಂದರು. ಎರಡೂ ತಿಂಗಳು ಕೇಂದ್ರ ಸರ್ಕಾರದಿಂದ ನೇರವಾಗಿ ಆಹಾರ ಧಾನ್ಯ ವಿತರಿಸಲಾಗುವುದು. ವೈಯಕ್ತಿಕವಾಗಿ ಹತ್ತಿರವಾದವರ ಮದುವೆಗಳಿಂದ ದೂರವಿದ್ದೇನೆ.‌ ರೂಪಾಂತರ ವೈರಸ್ ಅನಿರೀಕ್ಷಿತ ವೇಗದಲ್ಲಿ ಹಬ್ಬುತ್ತಿದೆ. ಜನರು ಸ್ವಯಂ ಲಾಕ್ ಡೌನ್ ನಿರ್ಬಂಧ ಹೇರಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಠಾಣಿ, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್ ಸೇರಿದಂತೆ ಗುತ್ತಿಗೆದಾರರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *

You may have missed