“ನಣದ್” ಮಗನ ಅಪಹರಣದ ಹೈಡ್ರಾಮಾ “ಬಾಬಿ” ಅಂದರ್…!!!
1 min readನಾದಿನಿಯ ಹಣಕ್ಕಾಗಿ ಸ್ವಂತ ಮಗನ ಕಿಡ್ನಾಪ್ ಕಥೆ ಕಟ್ಟಿದ ಬಾಬಿ
ಸಮೀನಾ ಅಂಜುಮ್ ಮಗನ ಕಿಡ್ನಾಪ್ ಆಗಿದೆ ಎಂದು ದೂರು ದಾಖಲು
ಕಲಬುರಗಿ: ಸಮೀನಾ ಅಂಜುಮ್ ಮಗ ಸೈಯದ್ ಮುಕ್ತಾರ್ ಹಾಶ್ಮಿ ಎಂಬುವನ ಅಪಹರಣವನ್ನ ಕಲಬುರಗಿ ನಗರದ ಗರೀಬ್ ನವಾಜ್ ಕಾಲೋನಿಯಿಂದ ಮಾಡಲಾಗಿದೆ ಎಂದು ಕಥೆ ಕಟ್ಟಿದ ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ.
ಕಿಡ್ನಾಪ್ ಮಾಡಿದ ಕಿಡ್ನಾಪರ್ಸ್‌ನಿಂದ 22 ಲಕ್ಷಕ್ಕೆ ಬೇಡಿಕೆಯಿಟ್ಟು ಲೇಟರ್ ಬರೆದು, ತಾನೇ ಹೋಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಳು.
ವೀಡಿಯೋ ಇದೆ… ಪೂರ್ಣ ನೋಡಿ…
ದೂರು ದಾಖಲಿಸಿದ ಸಮೀನಾ ಅಂಜುಮ್ ಕಿಡ್ನಾಪರ್ಸ್ ಹಣಕ್ಕೆ ಬೇಡಿಕೆಯಿಟ್ಟಿದ ಲೇಟರ್ ನೀಡಿದ್ದಳು. ಕಿಡ್ನಾಪ್ ವಿಚಾರ ಪೊಲೀಸರಿಗೆ ತಿಳಿಸದಂತೆ ಕಿಡ್ನಾಪರ್ಸ್ ಪತ್ರದಲ್ಲಿ ಉಲ್ಲೇಖಿಸಿದ್ದರು. ಹಾಗಾಗಿ, ದೂರು ನೀಡಿದ ಬಳಿಕ ಪೊಲೀಸರಿಗೆ ತನಿಖೆ ನಡೆಸದಂತೆ ಸಮೀನಾ ಮನವಿ ಮಾಡಿದ್ದಳು.
ಕಿಡ್ನಾಪ್ ಕಥೆಯ ಬಗ್ಗೆ ಅನುಮಾನ ಬಂದ ಪೊಲೀಸರು ಹಲವು ಆಂಗಲ್‌ನಲ್ಲಿ ತನಿಖೆ ನಡೆಸಿದ್ದರು. ಕಿಡ್ನಾಪರ್ಸ್ ಪತ್ರದಲ್ಲಿ ಸಮೀನಾ ಮಗನ ಹೆಸರು ಸೈಯದ್ ಮುಕ್ತಾರ ಹಾಶ್ಮಿ ಬದಲು ನಿನ್ನ ಮಗ ಉಮರ್‌ನ ಕಿಡ್ನಾಪ್ ಮಾಡಲಾಗಿದೆ ಅಂತಾ ಉಲ್ಲೇಖ ಮಾಡಲಾಗಿತ್ತು.
ಸಮೀನಾ ತನ್ನ ನಾದಿನಿಗೆ ನಿನ್ನ ಮಗನ ಕಿಡ್ನಾಪ್ ಮಾಡುವವರು ನನ್ನ ಮಗನನ್ನ ಕಿಡ್ನಾಪ್ ಮಾಡಿದ್ದಾರೆ. ಹಾಗಾಗಿ, ಕಿಡ್ನಾಪರ್ಸ್ ಬೇಡಿಕೆ ಇಟ್ಟಿದ 22 ಲಕ್ಷ ಹಣ ನೀಡುವಂತೆ ನಾದಿನಿಗೆ ತಾಕೀತು ಮಾಡಿದ್ದಳು. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಮೀನಾ ಮೇಲೆ ಅನುಮಾನ ಮೂಡಿತ್ತು.
ಸಮೀನಾ ವ್ಯತಿರಿಕ್ತ ಹೇಳಿಕೆ ಹಣಕ್ಕಾಗಿ ಬೇಡಿಕೆ ಇಟ್ಟಿರೋದನ್ನ ಕಂಡ ಪೊಲೀಸರು, ಸಮೀನಾರನ್ಮ ತೀವ್ರವಾಗಿ ವಿಚಾರಣೆ ನಡೆಸಿದಾಗ ಕಿಡ್ನಾಪ್ ಕಥೆ ಬಟಾ ಬಯಲಾಗಿದೆ.
ವಿಶ್ವವಿದ್ಯಾಲಯ ಪೊಲೀಸರಿಂದ ಕಿಡ್ನಾಪ್ ಕಥೆ ಕಟ್ಟಿದ ಸಮೀನಾ ಅಂಜುಮ್, ರಾಜಿಕ್ ಮತ್ತು ಮೊಬೀನ್ ಎಂಬುವವರನ್ನ ಬಂಧಿಸಿ, ಕ್ರಮ ಜರುಗಿಸಿದ್ದಾರೆ.